ಮಗನ ಸಾಕು ನಾಯಿ ಕಚ್ಚಿ ನಾಯಿ ಸಾವು

ಬುಧವಾರ, 13 ಜುಲೈ 2022 (15:05 IST)
ಮಗ ಪ್ರೀತಿಯಿಂದ ಸಾಕಿದ ಪಿಟ್‌ ಬುಲ್‌ ಸಾಕುನಾಯಿ ತಾಯಿಯನ್ನೇ ಕಚ್ಚಿ ಕೊಂದು ಹಾಕಿದ ಭೀಕರ ಘಟನೆ ಉತ್ತರ ಪ್ರದೇಶದ ಲಕ್ನೋದ ಕೈಸರ್‌ ಭಾಗ್‌ ನಲ್ಲಿ ನಡೆದಿದೆ.
ನಿವೃತ್ತ ಟೀಚರ್‌ ಆಗಿದ್ದ ಸುಶೀಲಾ ತ್ರಿಪಾಠಿ ಮೃತಪಟ್ಟ ದುರ್ದೈವಿ. ಜಿಮ್‌ ಟ್ರೈನರ್‌ ಆಗಿರುವ ಪುತ್ರ ಅಮಿತ್‌ ಸಾಕಿದ್ದ ಪಿಟ್‌ ಬುಲ್‌ ನಾಯಿ ಈ ಕೃತ್ಯ ಎಸಗಿದೆ.
 
ಅಮಿತ್‌ ಪಿಟ್‌ ಬುಲ್‌ ಮತ್ತು ಲ್ಯಾಬ್ರೊಡರ್‌ ಎರಡು ನಾಯಿಗಳನ್ನು ಸಾಕಿದ್ದರು. ಮೂರು ವರ್ಷಗಳ ಹಿಂದೆ ಮನೆಗೆ ಕರೆ ತರಲಾಗಿದ್ದ ಬ್ರೌನಿ ಎಂಬ ಹೆಸರಿನ ಪಿಟ್‌ ಬುಲ್‌ ನಾಯಿ ವೃದ್ಧೆಯ ಮೇಲೆ ದಾಳಿ ನಡೆಸಿ ಕೊಂದು ಹಾಕಿದೆ.
 
ಮನೆಯಲ್ಲಿ ವೃದ್ಧೆ ಒಬ್ಬರೇ ಇದ್ದಾಗ ಈ ಘಟನೆ ನಡೆದಿದ್ದು, ಮನೆಯ ಹೊರಗೆ ಹೋಗಿದ್ದ ಮಗ ಮರಳಿದಾಗ ತಾಯಿ ರಕ್ತದ ಮಡುವಿನಲ್ಲಿ ಬಿದ್ದಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಅತೀಯಾದ ರಕ್ತಸ್ರಾವದಿಂದ ಅಸುನೀಗಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ