ಆಂಡ್ರಾಯ್ಡ್ ಸ್ಮಾರ್ಟ್ಫೋನ್ ಬಳಕೆದಾರರು ಉಪಯೋಗಿಸುವ ಗೂಗಲ್ಪ್ಲೇ ಸ್ಟೋರ್ (Google Play Store) ನಲ್ಲಿ ನಕಲಿ ಆಯಪ್ಗಳ (Fake App) ಹಾವಳಿ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ . ಈಗಾಗಲೇ ಅನೇಕ ಬಾರಿ ಗೂಗಲ್ (Google) ತನ್ನ ಪ್ಲೇ ಸ್ಟೋರ್ನಿಂದ ಅಪಾಯಕಾರಿ ಆಯಪ್ಗಳನ್ನು ಕಿತ್ತೆಸೆದಿದೆ . ಈಗ ಮತ್ತೆ ಕೆಲವೊಂದು ಅಪ್ಲಿಕೇಶನ್ಗಳಲ್ಲಿ ಗೂಗಲ್ ಮಾಲ್ವೇರ್ ಅನ್ನು ಪತ್ತೆಹಚ್ಚಿದ್ದು , ಇದನ್ನು ಉಪಯೋಗಿಸುತ್ತಿರುವರಿಗೆ ಎಚ್ಚರಿಕೆ ನೀಡಿದೆ . ಅಲ್ಲದೆ ಗೂಗಲ್ ಪ್ಲೇ ಸ್ಟೋರ್ನಲ್ಲಿ ಕಂಡುಬಂದಿರುವ ಹೊಸ 40 ಅಪಾಯಕಾರಿ ಅಪ್ಲಿಕೇಶನ್‌ಗಳ ಪಟ್ಟಿಯನ್ನು ಪರಿಶೀಲಿಸಿ ಅವುಗಳನ್ನು ನೀವು ಇನ್ಸ್ಟಾಲ್ ಮಾಡಿದ್ದರೆ ತಕ್ಷಣವೇ ಡಿಲೀಟ್ ಮಾಡುವಂತೆ ಸೂಚನೆ ನೀಡಿದೆ
ಇದರಲ್ಲಿ ಹೆಚ್ಚಿನ ಆಯಪ್ಗಳು ಜೋಕರ್ ಮಾಲ್ವೆರ್ ಮೂಲಕ ಕೆಲಸ ಮಾಡುತ್ತದಂತೆ. ಇದು ಬಳಕೆದಾರರ ಫೇಸ್ಬುಕ್ ಬಗೆಗಿನ ಮಾಹಿತಿ, ಎಸ್ಎಮ್ಎಸ್ ಮಾಹಿತಿ, ಕಾಂಟೆಕ್ಟ್ ಲಿಸ್ಟ್, ನಿಮ್ಮ ಮೊಬೈಲ್ ಬಗೆಗಿನ ಮಾಹಿತಿ ಸೇರಿದಂತೆ ಅನೇಕ ವಿಚಾರವನ್ನು ಕದಿಯುತ್ತದೆ.