ಜನತೆಗೆ ಟೋಪಿ ಹಾಕುವುದೇ ಪ್ರಧಾನಿ ಮೋದಿ ಕಾಯಕ: ಓವೈಸಿ

ಬುಧವಾರ, 9 ಮೇ 2018 (13:20 IST)
ಪ್ರಧಾನಿ ಟೋಪಿ ಹಾಕುತ್ತ ತಿರುಗುತ್ತಾರೆ. ನಾನು ತಿನ್ನುವುದಿಲ್ಲ ತಿನ್ನಲು ಬಿಡುವುದಿಲ್ಲ ಅಂತ ಹೇಳುತ್ತಾರೆ.ವಿಜಯ್ ಮಲ್ಯ ತಿಂದು ಓಡಿ ಹೋದರು.ಇನ್ನೊಬ್ಬ ಮೋದಿಯೂ ಸಹ ತಿಂದು ಓಡಿ ಹೋದರು.ಇದು ಎನು ಪ್ರಧಾನಿಯವರೇ? ಎಂದು ಓವೈಸಿ ಪ್ರಶ್ನೆ ಮಾಡಿದ್ದಾರೆ. 
ಉಗಾರದಲ್ಲಿ ನಡೆದ ಜೆಡಿಎಸ್ ಪ್ರಚಾರ ಸಭೆಯಲ್ಲಿ ಅಸಾದುದ್ದಿನ್ ಓವೈಸಿ ಭಾಷಣ ಮಾಡಿ ಗಮನ ಸೆಳೆದರು. 3 ನೇ ಸ್ಥಾನದಲ್ಲಿ ಜೆಡಿಎಸ್ ಬರುತ್ತೆ ಅಂತ ಸಿದ್ದರಾಮಯ್ಯ ಮತ್ತು ಮೋದಿ ಹೇಳುತ್ತಾರೆ. ಆದರೆ, ಮೇ 15 ರಂದು ಯಾರು ಯಾವ ಸ್ಥಾನದಲ್ಲಿರುತ್ತಾರೆ ಎನ್ನುವುದು ಕಾದು ನೋಡಿ ಎಂದು ಗುಡುಗಿದರು.
 
ತ್ರಿವಳಿ ತಲಾಕ್ ರದ್ದತಿ ಬಿಲ್ ತೆಗೆದುಕೊಂಡು ಬಂದವರಿಗೆ ಲೋಕಸಭೆಯಲ್ಲಿಕಾಂಗ್ರೆಸ್ ಕೂಡ ಬಿಜೆಪಿಗೆ ಸಾಥ್ ನೀಡಿತು.
ನಮ್ಮ ಮಾತು ಕೇಳಲು ಅವರಿಬ್ಬರು ತಯಾರಿಲ್ಲ. ನಾನು ಮತ್ತು ತಮಿಳುನಾಡು ಸಂಸದರೊಬ್ಬರು ಇದಕ್ಕೆ ವಿರೋಧ ಮಾಡಿದ್ದೇವು.
 
ಜಮ್ಮುವಿನಲ್ಲಿ ಬಾಲಕಿ ಮೇಲೆ ಅತ್ಯಾಚಾರ ಆಯಿತು. ಅತ್ಯಂತ ಹೀನಾಯವಾಗಿ ಅವಳನ್ನ ಹತ್ಯೆ ಮಾಡಲಾಯಿತು. ಬಿಜೆಪಿ ಪಾರ್ಟಿಯ ಮಿನಿಸ್ಟರ್ ಒಬ್ಬರು ಆರೋಪಿಗಳನ್ನ ಅರೆಸ್ಟ್ ಮಾಡಿದಾಗ ಪ್ರತಿಭಟನೆ ಮಾಡಿದ್ರು. ಹೊಸ ತಲೆಮಾರಿನವರ ಮುಂದೆ ನಿಮ್ಮ ನಾಟಕಗಳು ನಡೆಯುವುದಿಲ್ಲ. 
 
ನಾನು ಮೊದಲ ಬಾರಿಗೆ ನಿಮ್ಮ ಊರಿಗೆ ಬಂದಿದ್ದೇನೆ.ನನಗೆ ಅಲ್ಲಾ  ಎಲ್ಲಿಯವರೆಗೂ ಪ್ರೇರೆಪಿಸುತ್ತಾನೊ ಅಲ್ಲಿಯವರೆಗೂ ನಾನು ಬಡವರ, ಹಿಂದುಳಿದವರ, ಅನ್ಯಾಯಕ್ಕೊಳಗಾದವರ, ಧ್ವನಿಯಾಗಿರುತ್ತೇನೆ. ನಾನು ಗಲ್ಲಿ ಗಲ್ಲಿ ತಿರುಗಿ ಅವರ ಬಳಿ ತೆರಳಿ ಅವರ ಧ್ವನಿಯಾಗುತ್ತೇನೆ ಎಂದು ಓವೈಸಿ ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ