ಖಾರದ ಪುಡಿ ಎರಚಿ ಚಿನ್ನ ದೋಚಿದ ಕಳ್ಳಿಯರು
ಆರೋಪಿಗಳನ್ನು ಮಾಗಡಿ ಮೂಲದ ವಸಂತಮ್ಮ (45) ಮತ್ತು ಹೇಮಾವತಿ(25) ಎಂದು ಗುರುತಿಸಲಾಗಿದ್ದು ಗುರುವಾರ ರಾತ್ರಿ ಕೋಣನಕುಂಟೆ ಕ್ರಾಸ್‌ನ ಮಹಾವೀರ್ ಗೋಲ್ಡ್ ಪ್ಯಾಲೇಸ್‌ಗೆ ಚಿನ್ನಾಭರಣ ಖರೀದಿಸುವ ನೆಪದಲ್ಲಿ ಬಂದಿದ್ದ ಅವರಿಬ್ಬರು ಮಾಲೀಕ ಲೋಕೇಶ್ ಆಭರಣಗಳನ್ನು ತೋರಿಸುತ್ತಿದ್ದಂತೆ ಆತನ ಮುಖಕ್ಕೆ ಖಾರದ ಪುಡಿ ಎರಚಿ ಪರಾರಿಯಾಗಿದ್ದಾರೆ.
ಕೂಡಲೇ ಲೋಕೇಶ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು ಕಳ್ಳಿಯರನ್ನು ಬಂಧಿಸಲು ಕಾರ್ಯಾಚರಣೆಗಿಳಿದ ಪೋಲೀಸರು ಅವರಿಬ್ಬರನ್ನು ಬಂಧಿಸಿ100 ಗ್ರಾಂ ತೂಕದ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ.