ಹೃದಯಾಘಾತದಿಂದ ಪೊಲೀಸ್ ಕಾನ್ಸ್​​ಟೇಬಲ್ ಸಾವು

ಗುರುವಾರ, 24 ಆಗಸ್ಟ್ 2023 (17:40 IST)
ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಗೋಗಿ ಠಾಣೆಯ ಪೊಲೀಸ್ ಕಾನ್ಸಟೇಬಲ್ ಬೆಂಗಳೂರಿನ ಆಸ್ಪತ್ರೆಗೆ ಚಿಕಿತ್ಸೆ ಪಡೆಯಲು ಹೋದಾಗ ಹೃದಯಘಾತವಾಗಿ ಮೃತಪಟ್ಟಿದ್ದಾರೆ. ಗೋಗಿ ಠಾಣೆಯ ದೇವಿಂದ್ರಪ್ಪ ಮೃತ ಕಾನ್ಸ್​​ಟೇಬಲ್. ಕಳೆದ ಮೂರು‌ ತಿಂಗಳಿನಿಂದ‌ ಅನಾರೋಗ್ಯದಿಂದ ಬಳಲುತ್ತಿದ್ರು. ಜೂನ್​ನಿಂದ ಅನಾರೋಗ್ಯದ ಹಿನ್ನೆಲೆ ರಜೆಯಲ್ಲಿದ್ರು. ತೀವ್ರ ಜ್ವರದಿಂದ ಬಳಲುತ್ತಿದ್ದ ದೇವಿಂದ್ರಪ್ಪ ನಿನ್ನೆ ಆಸ್ಪತ್ರೆಗೆ ತೋರಿಸಲು ಬೆಂಗಳೂರಿಗೆ‌ ಹೋಗಿದ್ರು.. ಆಸ್ಪತ್ರೆಗೆ ತೋರಿಸುವ ಮುನ್ನವೇ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಕಳೆದ 16 ವರ್ಷದಿಂದ ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ದೇವಿಂದ್ರಪ್ಪ ಸಾವನ್ನಪ್ಪಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ