ಪೊಲೀಸರಿಂದಲೇ ಠಾಣೆಯಲ್ಲಿ ಗುಂಡು ಪಾರ್ಟಿ: ಮಹಿಳಾ ಪೇದೆಗಳೇ ಸಪ್ಲೈಯರ್?

ಬುಧವಾರ, 14 ಜೂನ್ 2017 (12:52 IST)
ವಿಜಯಪುರ: ಪೊಲೀಸ್ ಪೇದೆಗಳು ಠಾಣೆಯಲ್ಲಿಯೇ ಗುಂಡು ಪಾರ್ಟಿ ನಡೆಸಿರುವ ಆರೋಪ ಕೇಳಿ ಬಂದಿದ್ದು, ಅದಕ್ಕೆ ಮಹಿಳಾ ಪೊಲೀಸ್ ಪೇದೆಗಳೇ ಸಪ್ಲೈಯರ್‌ಗಳಾಗಿ ಸೇವೆ ಸಲ್ಲಿಸುತ್ತಿರುವ ವಿಡಿಯೋ ಇದೀಗ ವೈರಲ್ ಆಗಿದೆ.
 
ರಕ್ಷಕರೇ ಭಕ್ಷಕರಂತೆ ವರ್ತಿಸಿರುವುದು ಪೊಲೀಸ್ ಇಲಾಖೆಗೆ ನಾಚಿಕೆಗೇಡಿತನದ ಸಂಗತಿಯಾಗಿದೆ.ಜಲನಗರ ಪೊಲೀಸ್ ಠಾಣೆಯಲ್ಲಿ ಪೊಲೀಸರು ಮದ್ಯ ಸೇವಿಸುತ್ತಿರುವುದಲ್ಲದೇ ಮಹಿಳಾ ಪೊಲೀಸ್ ಪೇದೆಗಳು ಮದ್ಯ ಸರಬರಾಜು ಮಾಡುತ್ತಿರುವ ದೃಶ್ಯ ಕೋಲಾಹಲ ಸೃಷ್ಟಿಸಿದೆ.
 
ಘಟನೆಯಲ್ಲಿ ಪೊಲೀಸರ ತಪ್ಪು ಸಾಬೀತಾದ್ರೆ ಕಠಿಣ ಕ್ರಮ ಖಚಿತ. ವಿಜಯಪುರ ಪೊಲೀಸ್ ವರಿಷ್ಠಾಧಿಕಾರಿಗೆ ತನಿಖೆ ನಡೆಸುವಂತೆ ಆದೇಶ ನೀಡಲಾಗಿದೆ ಎಂದು ಪೊಲೀಸ್ ಮಹಾನಿರ್ದೇಶಕರು ತಿಳಿಸಿದ್ದಾರೆ.  
 
ವಿಜಯಪುರ ಎಸ್ಪಿ ಕುಲದೀಪ ಜೈನ್, ಘಟನೆಯ ಬಗ್ಗೆ ತನಿಖೆ ನಡೆಸಿ ವರದಿ ನೀಡುವಂತೆ ಡಿವೈಎಸ್‌ಪಿ ಡಾ.ರಾಮ ಅರಸಿದ್ದಿಯವರಿಗೆ ಸೂಚನೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ. 

ವೆಬ್ ದುನಿಯಾ ಫ್ಯಾಂಟಸಿ ಕ್ರಿಕೆಟ್ ಲೀಗ್: ಆಡಿ 2.5 ಲಕ್ಷ ರೂ. ಮೌಲ್ಯದ ಬಹುಮಾನ ಗೆಲ್ಲಿ.. ವೆಬ್ ದುನಿಯಾ ಫ್ಯಾಂಟಸಿ ಲೀಗ್`ನಲ್ಲಿ ಭಾಗವಹಿಸಲು ಈ ಲಿಂಕ್ ಕ್ಲಿಕ್ ಮಾಡಿ..
 
http://kannada.fantasycricket.webdunia.com/

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ