ವಾಹನ ಸವಾರರಿಗೆ ಮಾತ್ರವಲ್ಲ ಇನ್ಮುಂದೆ ಪಾದಾಚಾರಿಗಳಿಗೂ ದಂಡ ವಿಧಿಸಲು ಬೆಂಗಳೂರು ಸಂಚಾರಿ ಪೊಲೀಸ್ ಇಲಾಖೆ ಚಿಂತನೆ ನಡೆಸಿದೆ. ನಿಗದಿತ ಸ್ಥಳಗಳಲ್ಲಿ ಮಾತ್ರ ರಸ್ತೆಯನ್ನ ದಾಟಬೇಕು. ಜೀಬ್ರಾ ಕ್ರಾಸ್ ಹೊರತುಪಡಿಸಿ ಎಲ್ಲೆಂದರಲ್ಲಿ ರಸ್ತೆ ದಾಟಿದರೆ, ಅಂತಹವರಿಗೆ ದಂಡ ವಿಧಿಸಲು ಸಂಚಾರಿ ಪೊಲೀಸ್ ಇಲಾಖೆ ಮುಂದಾಗಿದೆ.
ಬೇಕಾಬಿಟ್ಟಿಯಾಗಿ ಎಲ್ಲೆಂದರಲ್ಲಿ ರಸ್ತೆ ದಾಟಿ ಕಳೆದ ವರ್ಷ 69 ಜನ ಮೃತಪಟ್ಟಿದ್ದರು. ಅಪಘಾತಗಳಿಂದ ಜನರ ಜೀವ ಉಳಿಸಲು ಹೊಸ ನಿಯಮ ತರುವ ಪ್ರಸ್ತಾವನೆಯನ್ನು ಸಂಚಾರಿ ಪೊಲೀಸ್ ಇಲಾಖೆ ತಯಾರು ಮಾಡಿದೆ. ಆದರೆ, ಈ ಹೊಸ ನಿಯಮ ಜಾರಿಗೂ ಮುನ್ನವೇ ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿದ್ದು, ನಗರದಲ್ಲಿ ಜೀಬ್ರಾ ಕ್ರಾಸ್ ವ್ಯವಸ್ಥೆ ಎಷ್ಟರ ಮಟ್ಟಿಗೆ ಇದೆ ಎಂಬ ಪ್ರಶ್ನೆ ಮಾಡಿದ್ದಾರೆ.