ರಾಜಕಾರಣಿಗಳಿಗೆ ಫಿಟ್‌‍ನೆಸ್ ಇಲ್ಲದಿದ್ರೂ ಪರವಾಗಿಲ್ಲ, ಪೊಲೀಸ್‌ರಿಗೆ ಫಿಟ್‌‍ನೆಸ್ ಅಗತ್ಯ: ಸಿದ್ದರಾಮಯ್ಯ

ಗುರುವಾರ, 20 ಅಕ್ಟೋಬರ್ 2016 (11:28 IST)
ರಾಜಕಾರಣಿಗಳಿಗೆ ಫಿಟ್‌‍ನೆಸ್ ಇರದಿದ್ದರು ಪರವಾಗಿಲ್ಲ. ಆದರೆ, ಪೊಲೀಸ್‌ರಿಗೆ ಫಿಟ್‌‍ನೆಸ್ ಅಗತ್ಯ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಪ್ರಾಯ ಪಟ್ಟಿದ್ದಾರೆ.
 
ಇಂದು ಬೆಂಗಳೂರಿನ ರಾಜ್ಯಭವನದಲ್ಲಿ 66 ಪೊಲೀಸರಿಗೆ ರಾಜ್ಯಪಾಲ ವಜೂಬಾಯ್ ವಾಲಾ ರಾಷ್ಟ್ರಪತಿ ಪದಕ ನೀಡಿ ಸನ್ಮಾನಿಸಿದರು. ಈ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಗೃಹ ಸಚಿವ ಡಾ.ಜಿ.ಪರಮೇಶ್ವರ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. 
 
ಈ ವೇಳೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಪೊಲೀಸ್ ಇಲಾಖೆ ಶಿಸ್ತಿನ ಇಲಾಖೆ. ಶಿಸ್ತಿನ ಇಲಾಖೆಯಲ್ಲಿ ಅಶಿಸ್ತಿಗೆ ಅವಕಾಶ ನೀಡಬಾರದು. ಇದರಿಂದ ಇಲಾಖೆಯ ಮೇಲಿನ ನಂಬಿಕೆ ಕಡಿಮೆಯಾಗುತ್ತಾ ಹೋಗುತ್ತದೆ ಎಂದು ಹೇಳಿದರು. 
 
ಪೊಲೀಸ್ ಇಲಾಖೆ ಹಾಗೂ ರಾಜಕಾರಣಿಗಳಿಗೆ ಖಾಸಗಿ ಜೀವನವೇ ಇಲ್ಲ. ಆದರೂ ನಾವು ಈ ವೃತ್ತಿಗೆ ಬಂದಿದ್ದೇವೆ. ಪೊಲೀಸ್ ಇಲಾಖೆಯಲ್ಲಿ ಸದಾ ಒತ್ತಡವಿರುತ್ತದೆ. ಹೀಗಾಗಿ ಪೊಲೀಸ್‌ರಿಗೆ ಫಿಟ್‌‍ನೆಸ್ ಅಗತ್ಯ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪೊಲೀಸರಿಗೆ ಕಿವಿಮಾತು ಹೇಳಿದರು. 


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ