ಉಪ್ಪಿ ರಾಜಕೀಯ ಪ್ರವೇಶದ ಬಗ್ಗೆ ರಾಜಕಾರಣಿಗಳ ವಿಭಿನ್ನ ಪ್ರತಿಕ್ರಿಯೆ
ರಾಯಚೂರಿನಲ್ಲಿ ಮಾತನಾಡಿದ ಸಚಿವ ಡಿ.ಕೆ. ಶಿವಕುಮಾರ್, ನಟ ಉಪೇಂದ್ರ ಜನಸೇವೆ ಮಾಡಲು ಬರುತ್ತಿರುವುದಕ್ಕೆ ನಮ್ಮ ಸ್ವಾಗತವಿದೆ. ಇಷ್ಟು ದಿನ ಬಣ್ಣ ಹಚ್ಚಿ ಸಿನಿಮಾ ಮಾಡುತ್ತಿದ್ದರು. ಈಗ ಬಣ್ಣ ಹಚ್ಚದೇ ರಾಜಕೀಯ ಮಾಡಲಿ. ಅವರು ರಾಜಕೀಯ ಎಂಟ್ರಿಗೆ ನಾವು ಶುಭ ಕೋರುತ್ತೇವೆ ಎಂದು ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. ಜಾತ್ಯಾತೀತವಾಗಿ ರಾಜಕಾರಣ ಮಾಡುವುದಕ್ಕೆ ಸ್ವಾಗತ ಎಂದು ಅವರು ಹೇಳಿದ್ದಾರೆ.