ಯುವತಿಯೊಂದಿಗೆ ಚಕ್ಕಂದ: ಯುವಕರಿಗೆ ಗೂಸಾ

ಸೋಮವಾರ, 23 ಜುಲೈ 2018 (13:53 IST)
ಯುವತಿಯನ್ನ ಕರೆತಂದು ಚಕ್ಕಂದವಾಡುತ್ತಿದ್ದ ಯುವಕರನ್ನ ಪ್ರಶ್ನಿಸಿದ ವಿಚಾರವಾಗಿ ಪರಸ್ಪರ ಹೊಡೆದಾಡಿಕೊಂಡ  ಘಟನೆ ನಡೆದಿದೆ. ಯುವಕರಿಬ್ಬರು ಯುವತಿಯೊಬ್ಬಳನ್ನ ಕರೆತಂದು ಜಮೀನೊಂದರಲ್ಲಿ ಮೋಜುಮಸ್ತಿಯಲ್ಲಿ ತೊಡಗಿದ್ದಾರೆ. ಇದನ್ನ ಜಮೀನಿನ ಮಾಲೀಕ  ಪ್ರಶ್ನಿಸಿದ್ದಾರೆ. ಆಗ ಗಲಾಟೆ ಆಗಿದೆ. ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಯುವಕರಿಬ್ಬರನ್ನ ಹಾಗೂ ಹಲ್ಲೆ ನಡೆಸಿದ ದೊಣ್ಣೆಗಳನ್ನ ವಶಕ್ಕೆ ಪಡೆದಿದ್ದಾರೆ.

ನಂಜನಗೂಡು ತಾಲೂಕಿನ ಹ೦ಡುವಿನಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಹ೦ಡುವಿನಹಳ್ಳಿ ಗ್ರಾಮದ ಬಳಿ ಯುವಕರಿಬ್ಬರು ಯುವತಿಯೊಬ್ಬಳನ್ನ ಕರೆತಂದು ಜಮೀನೊಂದರಲ್ಲಿ ಮೋಜುಮಸ್ತಿಯಲ್ಲಿ ತೊಡಗಿದ್ದಾರೆ.ಇದನ್ನ ಜಮೀನಿನ ಮಾಲೀಕ ದೇವಣ್ಣ ಪ್ರಶ್ನಿಸಿದ್ದಾರೆ. ಇದರಿಂದ ಕುಪಿತಗೊಂಡ ಯುವಕರು ತಮ್ಮ ಸ್ನೇಹಿತರನ್ನ ಕರೆಸಿ ಗ್ರಾಮಕ್ಕೆ ನುಗ್ಗಿ ಜಮೀನು ಮಾಲೀಕನ ಮಗ ನಾಗರಾಜು  ಮೇಲೆ ದೊಣ್ಣೆಗಳಿಂದ ಮನಬಂದಂತೆ  ಥಳಿಸಿದ್ದಾರೆ. ಯುವಕರ ಗುಂಪಿನ ವರ್ತನೆಗೆ ಬೇಸತ್ತ ಗ್ರಾಮಸ್ಥರು ರೊಚ್ಚಿಗೆದ್ದು ಯುವಕರಿಗೆ ಥಳಿಸಿದ್ದಾರೆ.

8 ಮಂದಿ ತಂಡದ ಪೈಕಿ 6 ಮಂದಿ ತಪ್ಪಿಸಿಕೊಂಡು ಇಬ್ಬರು ಸಿಕ್ಕಿಬಿದ್ದಿದ್ದಾರೆ. ಮಾಹಿತಿ ಅರಿತ ನಂಜನಗೂಡು ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಧಾವಿಸಿ ರಾಮಮಂದಿರದಲ್ಲಿ ಕೂಡಿಹಾಕಿದ್ದ ಇಬ್ಬರು ಯುವಕರನ್ನ ವಶಕ್ಕೆ ಪಡೆದಿದ್ದಾರೆ. ಯುವಕರೊಂದಿಗೆ ಬಂದಿದ್ದ ಯುವತಿ ಸ್ಥಳದಿಂದ ಕಾಲ್ಕಿತ್ತಿದ್ದಾಳೆ. ದಾಂಧಲೆ ನಡೆಸಿದವರು  ದೇವರಸನ ಹಳ್ಳಿಯ ಚಿಕ್ಕಣ್ಣ ಹಾಗೂ ಯೋಗೇಶ್ ಎಂದು ಹೇಳಲಾಗಿದೆ. ಹ೦ಡುವಿನಹಳ್ಳಿ ಗ್ರಾಮಸ್ಥರು ಯುವಕರ ವಿರುದ್ಧ ನಂಜನಗೂಡು  ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ