ಪಡಿತರ ಸಾಮಾಗ್ರಿ ಪಡೆಯಲು ಪೋರ್ಟೆಬಿಲಿಟಿ ಸೌಲಭ್ಯ: ಸಚಿವ ಯು.ಟಿ.ಖಾದರ್

ಬುಧವಾರ, 24 ಆಗಸ್ಟ್ 2016 (09:52 IST)
ಪಡಿತರ ಸಾಮಾಗ್ರಿ ಪಡೆಯಲು ಪೋರ್ಟೆಬಿಲಿಟಿ ಸೌಲಭ್ಯ ಜಾರಿಯಾಗಲಿದೆ ಎಂದು ಆಹಾರ ಹಾಗೂ ನಾಗರಿಕ ಪೂರೈಕೆ ಸಚಿವ ಯು.ಟಿ.ಖಾದರ್ ತಿಳಿಸಿದರು.
 
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಂಗಳೂರು ಮಹಾನಗರ ಪಾಲಿಕೆ ಸರಹದ್ದಿನ ಕುಟುಂಬಗಳು ನಿರ್ಧಿಷ್ಟ ನ್ಯಾಯಬೆಲೆ ಅಂಗಡಿಗೆ ತೆರಳಿ ಸಾಮಾಗ್ರಿಗಳನ್ನು ಪಡೆಯಬೇಕಾಗುತ್ತಿದೆ. ಆದರೆ, ಮುಂದೆ ಪಾಲಿಕೆ ವ್ಯಾಪ್ತಿಯ ಯಾವುದೇ ನ್ಯಾಯಬೆಲೆ ಅಂಗಡಿಯಿಂದ ಪಡಿತರ ಸಾಮಾಗ್ರಿ ಪಡೆಯಬಹುದು ಎಂದು ತಿಳಿಸಿದರು. 
 
ಗ್ರಾಮೀಣ ಭಾಗದ ಪಡಿತರ ಚೀಟಿದಾರರು ನಗರಾಡಳಿತ ಸಂಸ್ಥೆಗಳ ವ್ಯಾಪ್ತಿಯಿಂದ ಹೊರಗಿರುವ, ಅದೇ ತಾಲೂಕಿನ ಯಾವುದೇ ನ್ಯಾಯಬೆಲೆ ಅಂಗಡಿಯಿಂದ ಪಡಿತರ ಸಾಮಾನುಗಳನ್ನು ಪಡೆದುಕೊಳ್ಳಬಹುದಾಗಿದೆ. ಇದರಿಂದ ಸಾರ್ವಜನಿಕರಿಗೆ ಅನುಕೂಲವಾಗಲಿದೆ ಎಂದು ಸಚಿವ ಯು.ಟಿ.ಖಾದರ್ ಹೇಳಿದರು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ .

ವೆಬ್ದುನಿಯಾವನ್ನು ಓದಿ