ಇಂದಿನಿಂದ ಜು.31ರವರೆಗೆ ಬೆಂಗಳೂರಿನ ಈ ಏರಿಯಾಗಳಲ್ಲಿ ಪವರ್ ಕಟ್..!
ಸೋಮವಾರ, 26 ಜುಲೈ 2021 (13:51 IST)
ಬೆಂಗಳೂರು(ಜು.26): ಸಿಲಿಕಾನ್ ಸಿಟಿ ಬೆಂಗಳೂರಿನ ಹಲವೆಡೆ ಇಂದಿನಿಂದ 7 ದಿನಗಳ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸಬೇಕೆಂದು ಎಂದು ಬೆಸ್ಕಾಂ ಮನವಿ ಮಾಡಿಕೊಂಡಿದೆ. ನಗರದ ವಿವಿಧ ಏರಿಯಾಗಳಲ್ಲಿ ಇಂದಿನಿಂದ(ಜು.26) ಜು.31ರವರೆಗೆ ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಅಧಿಕೃತವಾಗಿ ಮಾಹಿತಿ ನೀಡಿದೆ.
ಏಳು ದಿನಗಳ ಕಾಲ ಪ್ರತಿದಿನ 7 ಗಂಟೆಗಳ ಕಾಲ ವಿದ್ಯುತ್ ಲಭ್ಯವಿರಲ್ಲ. ಹೀಗಾಗಿ ಬೆಂಗಳೂರಿಗರು ಕೆಲವು ದಿನ ಪವರ್ ಕಟ್ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ.
ಬೆಸ್ಕಾಂ ಹೇಳಿರುವ ಪ್ರಕಾರ, ಬೆಂಗಳೂರಿನ ವಿಕ್ಟೋರಿಯಾ ಲೇಔಟ್ ಸೇರಿದಂತೆ ಹಲವೆಡೆ ಇಂದು ವಿದ್ಯುತ್ ಪೂರೈಕೆ ಇರುವುದಿಲ್ಲ ಎಂದು ತಿಳಿದು ಬಂದಿದೆ.
ವಿಕ್ಟೋರಿಯಾ ಲೇಔಟ್, ಪಾಮ್ ಗ್ರೋವ್ ರೋಡ್, ವಿವೇಕ ನಗರ, ಅಗರಂ, ಸೊನ್ನೇನಹಳ್ಳಿ, ವನ್ನಾರಪೇಟೆ, ಆಸ್ಟಿನ್ ಟೌನ್, ಆಂಜನೇಯ ಟೆಂಪಲ್ ಸ್ಟ್ರೀಟ್, ಕೆಎಸ್ಆರ್ಪಿ ಕ್ವಾರ್ಟರ್ಸ್, ಲಿಂಡನ್ ಸ್ಟ್ರೀಟ್, ಜ್ಸೇವಿಯರ್ ಲೇಔಟ್, ವೈಜಿ ಪಾಳ್ಯಂ ಏರ್ ಫೋರ್ಸ್ ಹಾಸ್ಪಿಟಲ್, ದೊಮ್ಮಲೂರು, ಲೈಫ್ಸ್ಟೈಲ್, ಕ್ಯಾಂಪ್ಬೆಲ್ ರೋಡ್ ಜಂಕ್ಷನ್, ರಿಚ್ಮಂಡ್ ರೋಡ್, ರುದ್ರಪ್ಪ ಗಾರ್ಡನ್, ನೀಲಸಂದ್ರ, ಬಜಾರ್ ಸ್ಟ್ರೀಟ್, ಆರ್ಕೆ ಗಾರ್ಡನ್, ರೋಸ್ ಗಾರ್ಡನ್ ಮತ್ತು ಓಆರ್ಸಿ ರಸ್ತೆಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
ಈ ಭಾಗದ ಜನ ವಿದ್ಯುತ್ ಸಂಬಂಧಿತ ನಿತ್ಯದ ಚಟುವಟಿಗಳನ್ನು ಬೆಳಗ್ಗೆ 10 ಗಂಟೆ ಒಳಗೆ ಹಾಗೂ ಸಂಜೆ 5 ಗಂಟೆಯ ಬಳಿಕ ಮಾಡಿಕೊಳ್ಳುವುದು ಒಳಿತು. ಪವರ್ ಕಟ್ ಸಮಸ್ಯೆಗೆ ತಕ್ಕಂತೆ ಕೆಲಸಗಳನ್ನು ಮಾಡಿಕೊಳ್ಳುವುದು ಉತ್ತಮ. ಬೆಸ್ಕಾಂ ಮನವಿಗೆ ಸಹಕರಿಸಬೇಕು ಎಂದು ನಿಗಮ ಕೇಳಿಕೊಂಡಿದೆ.
ಇತ್ತೀಚೆಗೆ ಜು.12ರಿಂದ 17ರವರೆಗೆ ಬೆಂಗಳೂರಿನ ಜನ ಪವರ್ ಕಟ್ ಸಮಸ್ಯೆಯನ್ನು ಎದುರಿಸಿದ್ದರು. ಜಯನಗರ ಸಬ್ ಸ್ಟೇಷನ್ ಸೇರಿದಂತೆ ಹಲವೆಡೆ ಬೆಳಗ್ಗೆ 10ರಿಂದ ಸಂಜರ 5.30ರವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಿತ್ತು. ಹೆಚ್ಎಸ್ಆರ್ ಲೇಔಟ್, ವಿಲ್ಸನ್ ಗಾರ್ಡನ್, ಕೆಹೆಚ್ ರೋಡ್, ಸಿದ್ದಯ್ಯ ರೋಡ್, ಟೆಲಿಕಾಂ ಲೇಔಟ್, ಮಾರುತಿ ಲೇಔಟ್, ಬೀರೇಶ್ವರ ನಗರ ಇಂಡಸ್ಟ್ರಿಯಲ್ ಏರಿಯಾ, ದೊಡ್ಡಮನೆ ಇಂಡಸ್ಟ್ರಿಯಲ್ ಏರಿಯಾ, ಸಾರಕ್ಕಿ ಮಾರ್ಕೆಟ್, ಬಿಸಿಎಂಸಿ ಲೇಔಟ್, ಪುಟ್ಟೇನಹಳ್ಳಿ ಲೇಔಟ್, ಲಾಲ್ಬಾಗ್ ರೋಡ್, ಬ್ಯಾಂಕ್ ಕಾಲೋನಿ, ರೋಸ್ ಗಾರ್ಡನ್ ಈ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜು ಆಗಿರಲಿಲ್ಲ