ಪ್ರಜ್ವಲ್ ರೇವಣ್ಣ ಕೀಚಕ: ಚಪ್ಪಲಿ ಹಾರ ಹಾಕಿ ಪ್ರತಿಭಟನೆ

Sampriya

ಭಾನುವಾರ, 28 ಏಪ್ರಿಲ್ 2024 (13:20 IST)
Photo Courtesy X
ಬೆಂಗಳೂರು: ಹಾಸನ ಜೆಡಿಎಸ್ ಸಂಸದ ಕೀಚಕ ಹಾಗೂ ಕಾಮುಕ ಪ್ರಜ್ವಲ್ ರೇವಣ್ಣ ಮುಗ್ಧ ಮಹಿಳೆಯರ ಮೇಲೆ ಅತ್ಯಾಚಾರ ಎಸಗಿ  ಮಾನಭಂಗ ಮಾಡಿ ಅತ್ಯಂತ ಕೀಳು ಮಟ್ಟದಲ್ಲಿ ದೌರ್ಜನ್ಯ ಎಸಗಿದ್ದಾನೆಂದು ಪ್ರತಿಭಟನೆ ನಡೆಸಿ ಪ್ರತಿಕೃತಿ ದಹಿಸಲಾಯಿತು.

ಪ್ರಜ್ವಲ ರೇವಣ್ಣ ಅವರನ್ನು ಬಂಧಿಸಿ, ಗಲ್ಲಿಗೇರಿಸಬೇಕೆಂದು ಆಗ್ರಹಿಸಿ ಪ್ರತಿಭಟನೆ ನಡೆಸಿ ಪ್ರತಿಕೃತಿ  ದಯಿಸಲಾಯಿತು.

ದೇಶದ ಇತಿಹಾಸದಲ್ಲಿ ಸಂಸದ ಒಬ್ಬ ಈ ರೀತಿ ಹೆಣ್ಣು ಮಕ್ಕಳನ್ನು ಅವಮಾನಿಸಿ ಹಿಂಸೆ ನೀಡಿ ಅವರ ಮೇಲೆ ಅತ್ಯಾಚಾರ ಎಸಗಿ ಲೈಂಗಿಕ ಕಿರುಕುಳ ನೀಡಿ ದೌರ್ಜನ್ಯ ಮಾಡಿರುವ  ಕಿಡಿಗೇಡಿ ಪ್ರಜ್ವಲ್ ರೇವಣ್ಣ ಜನತಾದಳ ಸಂಸದ ಎಂಬುವ ಅರಿವಿದ್ದರೂ ಸಹ ದೇಶದ ಪ್ರಧಾನಿ ನರೇಂದ್ರ ಮೋದಿ ರವರು ಆ ಕಿಡಿಗೇಡಿನ ಕರೆದು ತನ್ನ ಕಚೇರಿಯಲ್ಲಿ ದೇವೇಗೌಡರ ಕುಟುಂಬದೊಂದಿಗೆ ಭಾವಚಿತ್ರ ತೆಗೆಸಿಕೊಂಡು ನಮ್ಮ ಸರ್ಕಾರ ಹೆಣ್ಣು ಮಕ್ಕಳ ವಿರುದ್ಧ ಇದೆ ಎಂಬುದನ್ನು ಸಾಬೀತುಪಡಿಸಿದ್ದಾರೆ.

ದೇಶದ ಹೆಣ್ಣು ಮಕ್ಕಳನ್ನು ಈ ರೀತಿ ಹಿಂಸೆ ನೀಡಿದವರು ಸಹ ಮೌನಕ್ಕೆ ಶರಣಾಗಿರುವ ಬಿಜೆಪಿ ರಾಜ್ಯ ನಾಯಕರು ರಾಷ್ಟ್ರ ನಾಯಕರು ಕೂಡಲೇ ಮಹಿಳೆಯರ ಕ್ಷಮೆ ಕೋರಬೇಕು ಕೂಡಲ ಕೇಂದ್ರ ಸರ್ಕಾರ ಪ್ರಜ್ವಲ್ ರೇವಣ್ಣನ ಬಂಧಿಸಿ ಬಹಿರಂಗವಾಗಿ ಗಲ್ಲಿಗೇರಿಸಬೇಕೆಂದು ಆಗ್ರಪಡಿಸಿ ಮಹಿಳೆಯರು ತೀವ್ರ ಮನನೊಂದು  ಪ್ರತಿಭಟನೆ ನಡೆಸಿದರು.

ನೂರಾರು ಮುಗ್ಧ ಮಹಿಳೆಯರ ಮೇಲೆ ಈ ರೀತಿ ಬಹಿರಂಗವಾಗಿ ದಬ್ಬಾಳಿಕೆ ನಡೆಸಿದ್ದರು ಸಹ ಇದನ್ನ ಖಂಡಿಸದ ದೇವೇಗೌಡರ ಹಾಗೂ ಅವರ ಕುಟುಂಬದ ನಡವಳಿಕೆ ಇಡೀ ಕರ್ನಾಟಕದ ರಾಜ್ಯದ ಗೌರವವನ್ನು ಮಣ್ಣು ಪಾಲು ಮಾಡಿದೆ.

 ಮಹಿಳೆಯರನ್ನ ತಾಯಿ ಎಂದು ನಮೂದಿಸುವ ದೇವೇಗೌಡರು ಕುಮಾರಸ್ವಾಮಿ ರವರು ಇಂತಹ ಕಿಡಿಗೇಡಿಯನ್ನು ಏಕೆ ಖಂಡಿಸುತ್ತಿಲ್ಲ ಎಂಬುದು ರಾಜ್ಯದ ಜನರ ಪ್ರಶ್ನೆಯಾಗಿದೆ.

ರಾಜ್ಯದ ಮಹಿಳೆಯರ ಬಗ್ಗೆ ಕನ್ನಡಿಗರ ಮೇಲೆ ಗೌರವವಿದ್ದರೆ ಕೂಡಲೇ ಪತ್ರಿಕಾಗೋಷ್ಠಿ ಮೂಲಕ ಪ್ರಜ್ವಲ್ ರೇವಣ್ಣ ನನ್ನ ಗಲ್ಲಿಗೇರಿಸಿ ಎಂದು ಮಾನ್ಯ ಕುಮಾರಸ್ವಾಮಿ ರವರು ಹಾಗೂ ಎಚ್ ಡಿ ದೇವೇಗೌಡರು ಆಗ್ರಪಡಿಸಿ ಕನ್ನಡಿಗರ ಬಗ್ಗೆ ತನಗೆ ಕಾಳಜಿ  ಇದೆ ಎಂಬುದನ್ನು ತೋರಿಸಬೇಕೆಂದು ಪ್ರತಿಭಟನೆ ಮೂಲಕ ಆಗ್ರಪಡಿಸುತ್ತಿದ್ದೇವೆ.

ಈ ಪ್ರತಿಭಟನೆಯಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಎಸ್ ಮನೋಹರ್ ಕಾಂಗ್ರೆಸ್ ಪಕ್ಷದ ಮುಖಂಡರುಗಳಾದ ಎ ಆನಂದ್  ಪ್ರಕಾಶ್ ಹೇಮರಾಜು ಪರಿಸರ ರಾಮಕೃಷ್ಣ ಉಮೇಶ್ ರಂಜಿತ್ ಚಂದ್ರಶೇಖರ್ ಚಿನ್ನಿ ಪ್ರಕಾಶ್ ಓಬಳೇಶ್ ಮಹಿಳಾ ಕಾಂಗ್ರೆಸ್ ಮುಖಂಡರಾದ ಶ್ರೀಮತಿ ಉಮಾಬಾಯಿ ಹಾಗೂ ಮಹಿಳೆಯರು ಹಾಗೂ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ