ಎರಡು ರಾಷ್ಟ್ರೀಯ ಪಕ್ಷಗಳ ಮುಂದೆ ಭಿಕ್ಷೆ ಬೇಡುವ ಹೈಕಮಾಂಡ್ ಸಂಸ್ಕೃತಿ ತೊಲಗಬೇಕು – ನಟ ಪ್ರಕಾಶ್ ರೈ

ಸೋಮವಾರ, 23 ಏಪ್ರಿಲ್ 2018 (07:07 IST)
ಮಡಿಕೇರಿ : ಚುನಾವಣೆ ಬಳಿಕ ರಾಜ್ಯದಲ್ಲಿ ಅತಂತ್ರ ನಿರ್ಮಾಣವಾಗಬಹುದು. ಆಗ ಬಿಜೆಪಿ ಜೊತೆ ಜೆಡಿಎಸ್ ಕೈ ಜೋಡಿಸದೆ ನೈತಿಕತೆಯನ್ನು ಉಳಿಸಿಕೊಳ್ಳಬೇಕು ಎಂದು ಬಹುಭಾಷಾ ನಟ ಪ್ರಕಾಶ್ ರೈ ಮನವಿ ಮಾಡಿದ್ದಾರೆ.

ಮಡಿಕೇರಿಯಲ್ಲಿ ಆಯೋಜಿಸಲಾಗಿದ್ದ ಮಾಧ್ಯಮ ಸಂವಾದ ಕಾರ್ಯಕ್ರಮದಲ್ಲಿ ಮಾತಾನಾಡಿದ ಅವರು,’ ರಾಜ್ಯದಲ್ಲಿ ಪ್ರಾದೇಶಿಕ ಪಕ್ಷಗಳು ಗಟ್ಟಿಗೊಳ್ಳಬೇಕು. ಎರಡು ರಾಷ್ಟ್ರೀಯ ಪಕ್ಷಗಳ ಮುಂದೆ ಭಿಕ್ಷೆ ಬೇಡುವ ಹೈಕಮಾಂಡ್ ಸಂಸ್ಕೃತಿ ತೊಲಗಬೇಕು. ಜಸ್ಟ್ ಆಸ್ಕಿಂಗ್ ಎನ್ನುವುದು ರಾಜಕೀಯ ವೇದಿಕೆಯಲ್ಲ ರಾಜಕೀಯ ಪಕ್ಷಗಳು ಅಲ್ಪ ಸಂಖ್ಯಾತ ಗುಂಪಿನಲ್ಲಿವೆ, ಪ್ರಶ್ನಿಸುವ ಜನರು ಬಹುಸಂಖ್ಯೆಯಲ್ಲಿದ್ದಾರೆ. ನಾನು ಬಹುಸಂಖ್ಯಾತರ ಪರವಾಗಿ ಪ್ರಶ್ನಿಸಿ ಸಾಮಾನ್ಯನಾಗಿ ಇರುತ್ತೇನೆ. ರಾಜಕೀಯಕ್ಕೆ ಪ್ರವೇಶಿಸಿ ಎಂಎಲ್‍ಎ, ಎಂಪಿ ಆಗುವ ಮೂಲಕ ಸಣ್ಣ ಬಾವಿಗೆ ಬೀಳಲಾರೆ. ಸಾಗರದಂತಿರುವ ಜನರ ಬಳಿಯೇ ನಾನು ಸದಾ ಇರಲು ಇಚ್ಚೆಪಡುತ್ತೇನೆ. ನಾನು ಅನ್ಯಾಯವನ್ನು ನಿರಂತರವಾಗಿ ಪ್ರಶ್ನೆ ಮಾಡುತ್ತಲೇ ಇರುತ್ತೇನೆ. ಅಲ್ಲದೇ ಕೋಮುವಾದ ತಡೆಯಲು ಬಿಜೆಪಿ ವಿಫಲವಾಗುತ್ತಿದೆ. ಹಾಗಾಗೀ ನಾನು ಬಿಜೆಪಿಯನ್ನು ವಿರೋಧಿಸುತ್ತೇನೆ’ ಎಂದು ಹೇಳಿದ್ದಾರೆ.

 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ