ಶಾಲಿನಿ ರಜನೀಶ್ ಬಗ್ಗೆ ಅಂತಹ ಹೇಳಿಕೆ ನೀಡಿದ್ಯಾಕೆ: ರವಿಕುಮಾರ್ ವಿಚಾರಣೆಗೆ ಮುಂದಾದ ಪ್ರಲ್ಹಾದ್ ಜೋಶಿ

Krishnaveni K

ಶುಕ್ರವಾರ, 4 ಜುಲೈ 2025 (10:15 IST)
ಬೆಂಗಳೂರು: ಶಾಲಿನಿ ರಜನೀಶ್ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿರುವ ಬಿಜೆಪಿ ಎಂಎಲ್ ಸಿ ಎನ್ ರವಿಕುಮಾರ್ ಜೊತೆ ಇಂದು ಪ್ರಲ್ಹಾದ್ ಜೋಶಿ ಮಾತುಕತೆ ನಡೆಸಿ ವಿವರಣೆ ಪಡೆಯಲಿದ್ದಾರೆ ಎನ್ನಲಾಗಿದೆ.

ಶಾಲಿನಿ ರಜನೀಶ್ ರಾತ್ರಿ ರಾಜ್ಯ ಸರ್ಕಾರಕ್ಕೆ ದಿನಪೂರ್ತಿ ಮುಖ್ಯಮಂತ್ರಿಗಾಗಿ ಕೆಲಸ ಮಾಡುತ್ತಾರೆ ಎಂದು ಅಶ್ಲೀಲವಾಗಿ ಮಾತನಾಡಿದ್ದರು. ಅವರ ಹೇಳಿಕೆ ವಿರುದ್ಧ ಕಾಂಗ್ರೆಸ್ ಸಿಡಿದೆದ್ದಿದ್ದು ಮಹಿಳಾ ಆಯೋಗಕ್ಕೆ, ಪೊಲೀಸರಿಗೆ ದೂರು ನೀಡಿದೆ.

ಈಗ ರವಿಕುಮಾರ್ ಹೇಳಿಕೆ ಬಿಜೆಪಿಗೂ ಮುಜುಗರ ತಂದಿದೆ. ನಾನು ಯಾವುದೇ ಅಶ್ಲೀಲ ಪದ ಬಳಸಿಲ್ಲ ಎಂದು ರವಿಕುಮಾರ್ ಸ್ಪಷ್ಟನೆಯನ್ನೂ ನೀಡಿದ್ದಾರೆ. ಹಾಗಿದ್ದರೂ ವಿವಾದ ತಣ್ಣಗಾಗುವ ಲಕ್ಷಣವಿಲ್ಲ. ಹೀಗಾಗಿ ಈಗ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಖುದ್ದಾಗಿ ರವಿಕುಮಾರ್ ಬಳಿ ವಿವರಣೆ ಕೋರಿದ್ದಾರೆ.

ಈ ಹಿಂದೆಯೂ ಮಹಿಳಾ ಜಿಲ್ಲಾಧಿಕಾರಿಯೊಬ್ಬರ ಬಗ್ಗೆ ರವಿಕುಮಾರ್ ಇದೇ ರೀತಿ ವಿವಾದಾತ್ಮಕ ಮಾತನಾಡಿದ್ದರು. ಇದೀಗ ಮತ್ತೊಮ್ಮೆ ಮಹಿಳಾ ಅಧಿಕಾರಿ ಬಗ್ಗೆ ಅಶ್ಲೀಲ ಪದ ಬಳಸಿದ ಆರೋಪಕ್ಕೊಳಗಾಗಿದ್ದಾರೆ. ಇದು ಪಕ್ಷಕ್ಕೂ ಮುಜುಗರ ತಂದಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ