ಪ್ರತಾಪ್ ಚಂದ್ರಶೆಟ್ಟಿ ಕೈ ಹಿಡಿದ ಸಭಾಪತಿ ಸ್ಥಾನ?
ಮಂಗಳವಾರ, 11 ಡಿಸೆಂಬರ್ 2018 (19:23 IST)
ಜೆಡಿಎಸ್ ನ ಬಸವರಾಜ ಹೊರಟ್ಟಿ ಹಾಗೂ ಕಾಂಗ್ರೆಸ್ ನ ಎಸ್.ಆರ್.ಪಾಟೀಲ್ ಪ್ರಬಲ ಸ್ಪರ್ಧೆಯ ನಡುವೆಯೂ ಮಹತ್ವದ ಬೆಳವಣಿಗೆಯೊಂದರಲ್ಲಿ ಸಭಾಪತಿ ಸ್ಥಾನ ಪ್ರತಾಪ್ ಚಂದ್ರಶೆಟ್ಟಿಯವರ ಪಾಲಾಗುವ ಲಕ್ಷಣಗಳು ಗೋಚರಿಸಿವೆ.
ಅಚ್ಚರಿಯ ಬೆಳವಣಿಗೆವೊಂದರಲ್ಲಿ ಸಭಾಪತಿ ಸ್ಥಾನ ಕಾಂಗ್ರೆಸ್ ನ ಪ್ರತಾಪ್ ಚಂದ್ರಶೆಟ್ಟಿ ಅವರಿಗೆ ಒಲಿದಿದ್ದು, ನಾಳೆ ನಡೆಯುವ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ .
ಇಬ್ಬರ ಜಗಳ ಮೂರನೇ ಅವರಿಗೆ ಲಾಭ ಎಂಬಂತೆ ಜೆಡಿಎಸ್ ನ ಬಸವರಾಜ ಹೊರಟ್ಟಿ ಮತ್ತು ಕಾಂಗ್ರೆಸ್ ನ ಎಸ್ . ಆರ್ . ಪಾಟೀಲ್ ಅವರಿಗೆ ಸಭಾಪತಿ ಸ್ಥಾನ ದೊರೆಕದೆ ಕಾಂಗ್ರೆಸ್ ನ ಹಿರಿಯ ಸದಸ್ಯ ಪ್ರತಾಪ್ ಚಂದ್ರಶೆಟ್ಟಿ ಅವರ ಪಾಲಾಗಿದೆ .
ಕಾಂಗ್ರೆಸ್ ಹೈಕಮಾಂಡ್ ನಿಂದ ನಾಮಪತ್ರ ಸಲ್ಲಿಸುವಂತೆ ಪ್ರತಾಪ್ ಚಂದ್ರಶೆಟ್ಟಿ ಅವರಿಗೆ ಸೂಚನೆ ಬಂದಿದ್ದರಿಂದ ಸಹಜವಾಗಿಯೇ ಎಸ್ . ಆರ್ . ಪಾಟೀಲ್ ಅವರಿಗೆ ನಿರಾಶೆ ಉಂಟಾಯಿತು . ಇತ್ತ ಜೆಡಿಎಸ್ ನ ಆಲಿ ಸಭಾಪತಿ ಬಸವರಾಜ ಹೊರಟ್ಟಿ ಅವರಿಗೂ ನಾಮಪತ್ರ ಸಲ್ಲಿಸುವಂತೆ ಯಾವುದೇ ಸೂಚನೆಗಳು ಕಡೆ ಗಳಿಗೆಯವರೆಗೂ ಬರಲಿಲ್ಲ .
ಆ್ಯಪ್ನಲ್ಲಿ ವೀಕ್ಷಿಸಿ x