ಗೀತಾ ಮಹದೇವ ಪ್ರಸಾದ್ ವಿರುದ್ಧ ಹೇಳಿಕೆ ಹಿಂಪಡೆದ ಪ್ರತಾಪ್ ಸಿಂಹ

ಭಾನುವಾರ, 26 ಮಾರ್ಚ್ 2017 (10:50 IST)
ಮೈಸೂರು: ಗುಂಡ್ಲುಪೇಟೆ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ನಿಂದ ಕಣಕ್ಕಿಳಿದ ದಿವಂಗತ ಸಚಿವ ಮಹದೇವ್ ಪ್ರಸಾದ್ ಪತ್ನಿ ವಿರುದ್ಧ ಅವಹೇಳನಕಾರಿಯಾಗಿ ಹೇಳಿಕೆ ನೀಡಿದ್ದ ಸಂಸದ ಪ್ರತಾಪ್ ಸಿಂಹ ಹೇಳಿಕೆ ಹಿಂಪಡೆದಿದ್ದಾರೆ.

 

ಬಿಜೆಪಿ ಪರ ಚುನಾವಣೆ ಪ್ರಚಾರ ಮಾಡುವ ಭರದಲ್ಲಿ ಪ್ರತಾಪ್ ಸಿಂಹ, ಗಂಡನ ಗೂಟದ ಕಾರು ಕಳೆದುಕೊಳ್ಳಲು ಇಷ್ಟವಿಲ್ಲದೇ ಗೀತಾ ಚುನಾವಣಾ ಕಣಕ್ಕಿಳಿದಿದ್ದಾರೆ. ಗಂಡ ತೀರಿಕೊಂಡ ಮೇಲೆ ಹಾಲು, ತುಪ್ಪ ಬಿಟ್ಟಿದ್ದಾರೆಂದುಕೊಂಡಿದ್ದೆ. ಆದರೆ ಅವರು ಹಾಗಿಲ್ಲ ಎಂದು ಅವಹೇಳನಕಾರಿಯಾಗಿ ಮಾತನಾಡಿದ್ದರು.

 
ಇದಕ್ಕೆ ವ್ಯಾಪಕ ಟೀಕೆ ವ್ಯಕ್ತವಾಗಿತ್ತು. ಹೀಗಾಗಿ ಇಂದು ನನ್ನ ಮಾತಿನಿಂದ ಅವರ ಮನಸ್ಸಿಗೆ ನೋವಾಗಿದ್ದರೆ, ಹೇಳಿಕೆ ಹಿಂಪಡೆಯುತ್ತೇನೆ ಎಂದು ಹೇಳಿಕೆ ನೀಡಿದ್ದಾರೆ.

 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

ವೆಬ್ದುನಿಯಾವನ್ನು ಓದಿ