ರಾಜ್ಯಕ್ಕೆ ಅವಧಿಪೂರ್ವ ಮುಂಗಾರು ಪ್ರವೇಶ: ಬೆಂಗಳೂರಿನಲ್ಲಿ ನೂರು ವರ್ಷಗಳ ದಾಖಲೆ ಮುರಿದ ಮಹಾಮಳೆ

Sampriya

ಸೋಮವಾರ, 26 ಮೇ 2025 (15:17 IST)
Photo Courtesy X
ಬೆಂಗಳೂರು: ಕರ್ನಾಟಕ ರಾಜ್ಯಕ್ಕೆ ಅವಧಿಗೆ ಪೂರ್ವ ಮುಂಗಾರು ಪ್ರವೇಶಿಸಿದೆ. ಹೀಗಾಗಿ, ರಾಜ್ಯ ರಾಜಧಾನಿಯ ಇತಿಹಾಸದಲ್ಲೇ ಮೊದಲ ಬಾರಿಗೆ ಮೇ ತಿಂಗಳಿನಲ್ಲಿ ದಾಖಲೆಯ ಮಳೆಯಾಗಿದೆ.

ಬೆಂಗಳೂರಲ್ಲಿ ಈ ಬಾರಿ ಬಿದ್ದ ಮಳೆ ದಾಖಲೆ ಹೊಸ ಸೃಷ್ಟಿಸಿದೆ. ಈ ತಿಂಗಳಿನಲ್ಲಿ ಸುರಿದ ಮಳೆಯು ನೂರು ವರ್ಷದಲ್ಲೇ ಅಧಿಕವಾದುದು. ಬೆಂಗಳೂರಲ್ಲಿ ಇನ್ನೂ ಒಂದು ವಾರ ಸಾಧಾರಣ ಮಳೆ ಮುಂದುವರಿಯಲಿದೆ. ಗಾಳಿ 40 ರಿಂದ 50 ಕಿ.ಮೀ ವೇಗದಲ್ಲಿ ಬೀಸಲಿದೆ ಎಂದು ಹವಾಮಾನ ಇಲಾಖೆ ವಿಜ್ಞಾನಿ ಸಿಎಸ್ ಪಾಟೀಲ್ ಹೇಳಿದ್ದಾರೆ.

ಸಿಲಿಕಾನ್‌ ಸಿಟಿಯಲ್ಲಿ ಮೇ ತಿಂಗಳಲ್ಲೇ 307.9 ಮಿಮೀ ಮಳೆ ದಾಖಲೆಯಾಗಿದೆ. ಅದೂ ಮೇ 1 ರಿಂದ ಮೇ 26 ರವರೆಗೆ ಈ‌ ಪ್ರಮಾಣದಲ್ಲಿ ಮಳೆಯಾಗಿದೆ. 2023 ಮೇ ತಿಂಗಳಲ್ಲಿ 305.4 ಮಿಮೀ ಮಳೆ ದಾಖಲಾಗಿತ್ತು. ಇದು ಇಲ್ಲಿಯವರೆಗಿನ ದಾಖಲೆಯಾಗಿತ್ತು. ಈ ದಾಖಲೆಯನ್ನು ಈ ಬಾರಿಯ ಮಳೆ ಮುರಿದಿದೆ.

ಕರ್ನಾಟಕ ರಾಜ್ಯಕ್ಕೆ ಜೂನ್ 5 ಕ್ಕೆ ಮುಂಗಾರು ಆಗಮನದ ನಿರೀಕ್ಷೆ ಇತ್ತು. ಆದರೆ ಮೇ 24ಕ್ಕೆ ರಾಜ್ಯಕ್ಕೆ ಮುಂಗಾರು ಪ್ರವೇಶವಾಗಿದೆ. ಈಗ ಸಂಪೂರ್ಣ ರಾಜ್ಯಕ್ಕೆ ಮುಂಗಾರು ಪ್ರವೇಶವಾಗಿದೆ. 2009 ರಲ್ಲಿ ಮೇ 23ಕ್ಕೆ ಕೇರಳ ಪ್ರವೇಶಿಸಿದ್ದ ಮುಂಗಾರು ಈ ಬಾರಿ ಮೇ 24ರಂದೇ ಪ್ರವೇಶ ಮಾಡಿದೆ‌. ಈ ಬಾರಿ ದಕ್ಷಿಣ ಒಳನಾಡಿನಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗುವ ನಿರೀಕ್ಷೆಯಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ