ಸರ್ಕಾರಿ ಕಾಲೇಜುಗಳ ಉನ್ನತೀಕರಣಕ್ಕೆ ತಯಾರಿ

ಮಂಗಳವಾರ, 24 ಅಕ್ಟೋಬರ್ 2023 (13:20 IST)
ಸರ್ಕಾರಿ ಕಾಲೇಜನ್ನು ಮೇಲ್ದರ್ಜೆಗೆ ಏರಿಸಲು ಉನ್ನತ ಶಿಕ್ಷಣ ಇಲಾಖೆ ಪ್ಲಾನ್ ಮಾಡಿಕೊಂಡಿದೆ.ಸರ್ಕಾರಿ ಕಾಲೇಜುಗಳನ್ನ ಉನ್ನತ ಮಟ್ಟಕ್ಕೆ ಕೊಂಡ್ಯೊಯಲು ವಿಶ್ವ ಬ್ಯಾಂಕ್‌ನಿಂದ ₹1,540 ಕೋಟಿ ಸಾಲವನ್ನಸಾಫ್ಟ್ ಲೋನ್ ಮೂಲಕ ಸಾಲ ಪಡೆಯಲು ಉನ್ನತ ಶಿಕ್ಷಣ ಇಲಾಖೆ ಮುಂದಾಗಿದೆ. 1,540 ಕೋಟಿ ಸಾಲ ಪಡೆದು ಪ್ರತಿ ಜಿಲ್ಲೆಗೆ ಒಂದರಂತೆ ಕಾಲೇಜು ಉನ್ನತಿಕರಣವನ್ನ ಮಾಡಲು ತಯಾರಿ ನಡೆಸಿದೆ.. ಈಗಾಗಲೇ ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೂ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.

ಇನ್ನು ಈ ಬಗ್ಗೆ ಸಿಎಂ ಜೊತೆ ಸಭೆ ನಡೆಸಿರುವ ಉನ್ನತ ಶಿಕ್ಷಣ ಸಚಿವ ಡಾ.ಎಂಸಿ ಸುಧಾಕರ್ ಒಟ್ಟು 72 ಕಾಲೇಜುಗಳ ಉನ್ನತೀಕರಣಕ್ಕೆ ಮುಂದಾಗಿದ್ದೇವೆ. ಸೆಂಟರ್‌ ಆಫ್‌ ಎಕ್ಸೆಲೆನ್ಸ್‌ ಯೋಜನೆಯಡಿಯಲ್ಲಿ 31 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳು ಇದ್ದು, 31 ಸರ್ಕಾರಿ ಪಾಲಿಟೆಕ್ನಿಕ್‌‌ ಹಾಗೂ 10 ಇಂಜಿನಿಯರಿಂಗ್‌ ಕಾಲೇಜುಗಳು ಅಭಿವೃದ್ಧಿ ಮಾಡಲಾಗಿದೆ.. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ 620 ಕೋಟಿ ಅಂದಾಜು ವೆಚ್ಚ ತಗುಲಲಿದ್ದು, ಇಂಜಿನಿಯರ್ ಕಾಲೇಜಿಗೆ 300 ಕೋಟಿ ಅಂದಾಜು ವೆಚ್ಚದ ಯೋಜನೆಗೆ ಪ್ಲಾನ್ ಮಾಡಲಾಗಿದೆ..ಈ ಯೋಜನೆ ಕುರಿತಂತೆ ಹಣಕಾಸು ಇಲಾಖೆಗೆ ಕಡತ ಕಳಿಸಲು ಸಿಎಂ ಸೂಚನೆ ನೀಡಿದ್ದಾರೆ ಎಂದು ತಿಳಿಸಿದ್ರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ