ಮಹಿಳಾ ಮೀಸಲು ವಿಧೇಯಕಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಸಹಿ
ಮಹಿಳಾ ಮೀಸಲಾತಿ ಮಸೂದೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಒಪ್ಪಿಗೆ ನೀಡಿದ ನಂತರ ನಾರಿ ಶಕ್ತಿ ವಂದನ್ ಅಧಿನಿಯಮ್ ಭಾರತದಲ್ಲಿ ಕಾನೂನು ಎನಿಸಿಕೊಂಡಿದೆ. ಈಗ ಕಾಯಿದೆಯಾಗುತ್ತಿದ್ದಂತೆ ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಶೇ.33ರಷ್ಟು ಸ್ಥಾನಗಳು ಮಹಿಳೆಯರಿಗೆ ಮೀಸಲಾಗಲಿವೆ. ಆದರೆ, ಹೊಸ ಜನಗಣತಿ ಮತ್ತು ಡಿಲಿಮಿಟೇಶನ್ ನಂತರ ಮೀಸಲಾತಿ ಜಾರಿಗೆ ಬರಲಿದೆ. ಇನ್ನು ಕಾಂಗ್ರೆಸ್ ಕೂಡ ಒಬಿಸಿ ಮೀಸಲಾತಿಯನ್ನು ಆಗ್ರಹಿಸಿತ್ತು. ಸಂಸತ್ತಿನಲ್ಲಿ ಅಂಗೀಕಾರದ ನಂತರ, ರಾಷ್ಟ್ರಪತಿಗಳ ಸಹಿ ಹಾಕಿ ಕಾನೂನಾದರೂ, ಇದು ಜಾರಿಗೆ ಬರಲು ದೀರ್ಘಾವಧಿ ತಗೆದುಕೊಳ್ಳುತ್ತದೆ ಎಂದು ಕಾಂಗ್ರೆಸ್ ಹೇಳಿದೆ.