ಸಿದ್ದಗಂಗಾ ಶ್ರೀಗಳಿಗೆ 110ನೇ ಜನ್ಮದಿನದ ಸಂಭ್ರಮ: ಶುಭಕೋರಿದ ಪ್ರಧಾನಿ ಮೋದಿ

ಶನಿವಾರ, 1 ಏಪ್ರಿಲ್ 2017 (10:37 IST)
ನಡೆದಾಡುವ ದೇವರು, ತ್ರಿವಿಧ ದಾಸೋಹಿ ಶ್ರೀ ಸಿದ್ದಗಂಗಾ ಶ್ರೀಗಳಿಗೆ ಇವತ್ತು 110ನೇ ಜನ್ಮದಿನದ ಸಂಭ್ರಮ. ಈ ಹಿನ್ನೆಲೆಯಲ್ಲಿ ಇಡೀ ತುಮಕೂರು ನಗರ ಮತ್ತು ಮಠದಲ್ಲಿ ಸಂಭ್ರಮದ ವಾತಾವರಣ ಮನೆ ಮಾಡಿದೆ. ಸಾವಿರಾರು ಭಕ್ತಾದಿಗಳು ವಿವಿಧೆಡೆಯಿಂದ ಶ್ರೀಗಳ ದರ್ಶನಕ್ಕೆ ಮಠಕ್ಕೆ ಆಗಮಿಸುತ್ತಿದ್ದಾರೆ.

 ಬೆಳಗ್ಗೆಯಿಂದಲೇ ಮಠದಲ್ಲಿ ಹಲವು ಪೂಜಾ ಕೈಂಕರ್ಯಗಳು ನೇರವೇರುತ್ತಿವೆ. ಬೆಳಗ್ಗೆ ಶಿವಪೂಜೆ ಮುಗಿಸಿ ಹೊರಬಂದ ಶ್ರೀಗಳನ್ನ 110 ಪೂರ್ಣಕುಂಭ ಸ್ವಾಗತದ ಮೂಲಕ ವೇದಿಕೆಗೆ ಕರೆತರಲಾಯ್ತು. ಮಧ್ಯಾಹ್ನ ಮೆರವಣಿಗೆ ಸಹ ನಡೆಯಲಿದೆ. ಮಠದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ರಾಜ್ಯಪಾಲ ವಜುಭಾಯಿ ವಾಲಾ ಭಾಗವಹಿಸಲಿದ್ದಾರೆ. ಗಣ್ಯಾತಿಗಣ್ಯರು ಶ್ರೀಗಳ ದರ್ಶನಕ್ಕೆ ಬರುವ ಸಾಧ್ಯತೆ ಇದೆ. ಸಂಜೆ ವಿವಿಧ ಮಠಾಧೀಶರ ಸಮ್ಮುಖದಲ್ಲಿ ಗುರವಂದನೆ ಕಾರ್ಯಕ್ರಮ ನಡೆಯಲಿವೆ.

ಮಠಕ್ಕೆ ಬರುವ ಭಕ್ತಾದಿಗಳಿಗೆ ಬೆಳಗ್ಗೆಯಿಂದ ರಾತ್ರಿ 10ಗಂಟೆವರೆಗೆ ಅನ್ನದಾನದ ವ್ಯವಸ್ಥೆ ಮಾಡಲಾಗಿದೆ. 2 ಲಕ್ಷ ಜನಕ್ಕೆ ಊಟದ ವ್ಯವಸ್ಥೆ ಮಾಡಲಾಗಿದೆ.

ಈ ಮಧ್ಯೆ, ಪ್ರಧಾನಮಂತ್ರಿ ನರೇಂದ್ರಮೋದಿ ಟ್ವಿಟ್ಟರ್ ಮೂಲಕ ಶ್ರೀಗಳಿಗೆ ಶುಭ ಕೋರಿದ್ದು, ಶ್ರೀಗಳ ಸಮಾಜ ಸೇವಯನ್ನ ಶ್ಲಾಘಿಸಿದ್ದಾರೆ.


Birthday wishes to the venerable Sree Sree Shivakumar Swamiji. His service to society has positively impacted several lives. pic.twitter.com/5b46nQN9g5

— Narendra Modi (@narendramodi) April 1, 2017

ವೆಬ್ದುನಿಯಾವನ್ನು ಓದಿ