ಪ್ರೀತಂ ಗೌಡ ಹೊಳೇನರಸೀಪುರ ಸೀಕ್ರೆಟ್!
ಹಾಸನದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ನಿನ್ನೆ ಪ್ರೀತಂಗೌಡ ನಾಮಪತ್ರ ಸಲ್ಲಿಸಿದ್ದು, ಇಂದು ಹೊಳೆನರಸೀಪುರ ಕ್ಷೇತ್ರ ಅಭ್ಯರ್ಥಿಯಾಗಿಯೂ ನಾಮಪತ್ರ ಸಲ್ಲಿಸಲಿದ್ದಾರಾ ಎಂಬ ಚರ್ಚೆ ಶುರುವಾಗಿದೆ. ಇದಕ್ಕೆ ಪೂರಕವೆಂಬಂತೆ ಚುನಾವಣಾ ಪ್ರಚಾರವನ್ನು ಬೇಗ ಮುಗಿಸಿ ಹೊಳೆನರಸೀಪುರದಲ್ಲಿ ನಾಮಿನೇಷನ್ ಮಾಡಬೇಕು ಎಂದು ಪ್ರೀತಂಗೌಡ ಮಾತುಗಳನ್ನಾಡಿದ್ದು, ಹೊಸ ಬಾಂಬ್ ಸಿಡಿಸಿದ್ದಾರೆ. ಹಾಸನದ ಗುಡ್ಡೇನಹಳ್ಳಿ ಬಡಾವಣೆಯಲ್ಲಿ ಇಂದು ಬೆಳಗ್ಗೆ ಪ್ರಚಾರದ ವೇಳೆ ಕಾರ್ಯಕರ್ತರ ಜೊತೆ ಮಾತನಾಡಿದ ಪ್ರೀತಂಗೌಡ, ಹೊಳೆನರಸೀಪುರದಲ್ಲಿ ನಾಮಿನೇಷನ್ ಮಾಡಬೇಕು.. ಹಾಗಾಗಿ ಬೇಗ ಮುಗಿಸಿ ಎನ್ನುವ ಮಾತುಗಳನ್ನಾಡಿದ್ದಾರೆ. ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ಪ್ರೀತಂಗೌಡ, ನಮ್ಮ ಪಕ್ಷದ ವರಿಷ್ಠರು ರಣತಂತ್ರ ಮಾಡಿದ್ದಾರೆ.. ಆ ತಂತ್ರ ಏನೆಂದು ಇಂದು ಹೇಳುತ್ತೇನೆ, ನಾಮಪತ್ರ ಸಲ್ಲಿಸುವುದು ಖಚಿತ. ಕಾದು ನೋಡಿ ಎಂದು ಹೇಳುವ ಮೂಲಕ ವಿಷಯವನ್ನು ನಿಗೂಢವಾಗಿ ಕಾಪಾಡಿಕೊಳ್ಳುತ್ತಲೇ ಮತ್ತಷ್ಟು ಕುತೂಹಲ ಹೆಚ್ಚಿಸಿದ್ದಾರೆ.