ನಿಷೇಧಾಜ್ಞೆ ಜಾರಿ! ಹೈಸ್ಕೂಲ್ ಆರಂಭ

ಸೋಮವಾರ, 14 ಫೆಬ್ರವರಿ 2022 (09:17 IST)
ವಿದ್ಯಾರ್ಥಿಗಳು ಸಮವಸ್ತ್ರದಲ್ಲೇ ಶಾಲೆಗೆ ಬರಬೇಕು. ಹಿಜಬ್, ಕೇಸರಿ ಶಾಲು, ನೀಲಿ ಶಾಲು, ಧಾರ್ಮಿಕ ಉಡುಗೆಗಳಿಗೆ ಅವಕಾಶ ಇಲ್ಲ.

ಸರ್ಕಾರಿ ಆದೇಶ ಪಾಲಿಸದಿದ್ದರೆ ಶಾಲೆಗೆ ಪ್ರವೇಶ ಇಲ್ಲ. ಶಾಲಾ ಆವರಣದಲ್ಲಿ ಪ್ರತಿಭಟನೆ ನಿಷೇಧಿಸಲಾಗಿದ್ದು, ಸಮವಸ್ತ್ರ ಧರಿಸದಿದ್ದರೆ ಪ್ರತ್ಯೇಕ ಕೊಠಡಿಯಲ್ಲಿ ಕೂರಿಸಲು ಅವಕಾಶ ಇಲ್ಲ.

 
ಸೂಕ್ಷ್ಮ ಜಿಲ್ಲೆಗಳಲ್ಲಿ ಪರಿಸ್ಥಿತಿಗೆ ಅನುಗುಣವಾಗಿ 144 ಸೆಕ್ಷನ್ ಜಾರಿ ಮಾಡಲಾಗಿದ್ದು, ನಿಷೇಧಾಜ್ಞೆ ಜಾರಿಗೆ ಎಸ್ಪಿಗಳಿಗೆ ಅಧಿಕಾರ ನೀಡಲಾಗಿದೆ. ಗಲಾಟೆ ನಡೆದ ಜಿಲ್ಲೆಗಳಲ್ಲಿ ಹೆಚ್ಚುವರಿ ಪೊಲೀಸರ ನಿಯೋಜಿಸಿದ್ದು, ಪರಿಸ್ಥಿತಿ ಕೈ ಮಿರಿದರೆ ಶಾಲೆಗಳಿಗೆ ರಜೆ ನೀಡುವ ಅಧಿಕಾರವನ್ನು ಡಿಸಿ, ಎಸ್ಪಿಗಳಿಗೆ ನೀಡಲಾಗಿದೆ.

ಸರ್ಕಾರದ ಆದೇಶ ಪಾಲಿಸಿದ್ದರೆ ದೂರು ದಾಖಲಾಗುತ್ತದೆ. ರಾಷ್ಟ್ರ ಬಾವುಟ ಹಾರಾಡುವ ಸ್ಥಳಗಳಲ್ಲಿ ಹೆಚ್ಚುವರಿ ಭದ್ರತೆ ಕಲ್ಪಿಸಲಾಗಿದ್ದು, ಶಾಲೆಗಳ ಆವರಣದಲ್ಲಿ ಪ್ರತಿಭಟನೆ, ಧರಣಿಗೆ ನಿರ್ಬಂಧ ಹೇರಲಾಗಿದೆ.  

ಯಾವುದೇ ಸಂಘಟನೆಗಳಿಗೆ ಶಾಲೆಯ ಆವರಣಕ್ಕೆ ಪ್ರವೇಶ ಇಲ್ಲ. ಪೋಷಕರು ಹೊರತುಪಡಿಸಿ ಇನ್ಯಾರು ಶಾಲೆ ಆವರಣಕ್ಕೆ ಬರುವಂತೆ ಇಲ್ಲ. ಶಾಲಾ-ಕಾಲೇಜುಗಳ ಸುತ್ತ ಅನುಮಾನಾಸ್ಪದ ವ್ಯಕ್ತಿಗಳು ಕಂಡರೆ ಕೂಡಲೇ ಕ್ರಮ ಜರುಗಿಸಲಾಗುತ್ತದೆ. ಅನುಮಾನಾಸ್ಪದ ಸಂಘಟನೆಗಳ ಮೇಲೆ ನಿಗಾ ಇಡಲು ಸೂಚನೆ ನೀಡಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ