ಲಂಚ ಕೇಳಿದ್ದಕ್ಕೆ , ಪಡೆದಿದ್ದಕ್ಕೆ ಸಾಕ್ಷಿ ಅತ್ಯಗತ್ಯ

ಮಂಗಳವಾರ, 2 ಜನವರಿ 2024 (19:41 IST)
ಲಂಚದ ಆರೋಪ ಮಾಡುವಾಗ ಲಂಚ ನೀಡಿದ್ಕಕೆ ಮತ್ತು ಸರ್ಕಾರಿ ಅಧಿಕಾರಿ ಲಂಚ ಪಡೆದಿದ್ದಕ್ಕೆ ಸಾಕ್ಷಿ‌ ಇರಬೇಕಾದ್ದು ಅತ್ಯಗತ್ಯ ಎಂದು ಹೈಕೋರ್ಟ್‌ ಹೇಳಿದೆ. ಗದಗದ ನಿವೃತ್ತ ಸಬ್‌ ರಿಜಿಸ್ಟ್ರಾರ್‌ ಶ್ರೀಕಾಂತ್‌ ವಿರುದ್ದ ಎಸಿಬಿ ದಾಖಲಿಸಿದ್ದ ಆರೋಪವನ್ನು ಇದೇ ಆಧಾರದ ಮೇಲೆ ಹೈಕೋರ್ಟ್‌ ರದ್ದುಪಡಿಸಿದೆ. 
 
 ಶ್ರೀಕಾಂತ್‌ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಪೀಠ,  ಎಸಿಬಿ ಯಂತಹ ಭ್ರಷ್ಟಾಚರ ವಿರೋಧಿ ಸಂಸ್ಥೆಗಳು ಆರೋಪಿಗಳ ಮೇಲೆ ದಾಳಿ ನಡೆಸುವ ಸಂದರ್ಭದಲ್ಲಿ ಆರೋಪಿತ ಸರ್ಕಾರಿ ಅಧಿಕಾರಿ ಮುಂದೆ ಕೆಲಸ ಬಾಕಿಯಿದ್ದು, ಅದನ್ನುನಿರ್ವಹಿಸಲು ಅವರು ಲಂಚಕ್ಕಾಗಿ ಬೇಡಿಕೆ ಇಟ್ಟಿರಬೇಕು ಇಲ್ಲವೇ  ಲಂಚ ಸ್ವೀಕರಿಸಿರಬೇಕು. ಆಗ ಮಾತ್ರ ಆರೋಪ ಸಾಬೀತುಪಡಿಸಲು ಸಾಧ್ಯವಿದೆ ಎಂದು ಹೇಳಿದೆ. 
 
ಜೊತೆಗೆ, ಲಂಚ ಕೇಳಿದ್ದಕ್ಕೂ, ಪಡೆದಿದ್ದಕ್ಕೂ ಸಾಕ್ಷ್ಯ ಇರಬೇಕು .ಅಧಿಕಾರಿಗಳು ಅರ್ಜಿದಾರರು ಬೇಡಿಕೆಯಿಟ್ಟ ಲಂಚ ಸ್ವೀಕರಿಸಿದ ಘಟನೆಯ ಪಂಚನಾಮೆ ಮಾಡಿಲ್ಲ. ಆದ್ದರಿಂದ ಪ್ರಕರಣ ವಿಚಾರಣೆಗೆ ಮುಂದುವರೆಸಿದರೆ ಕಾನೂನಿನ ದುರ್ಬಳಕೆಯಾಗಲಿದೆ ಎಂದು ಕೋರ್ಟ್  ಪ್ರಕರಣವನ್ನು ರದ್ದುಪಡಿಸಿದೆ.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ