ಬಳ್ಳಿಗೆ ಸಿಲುಕಿದ್ದ ಕರಡಿ ರಕ್ಷಣೆ

ಶುಕ್ರವಾರ, 8 ಏಪ್ರಿಲ್ 2022 (16:49 IST)
ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ತಾಲೂಕಿನ ಕಾತೂರ ಅರಣ್ಯ ವಲಯ ವ್ಯಾಪ್ತಿಯ, ಓರಲಗಿ ಅರಣ್ಯ ಪ್ರದೇಶದಲ್ಲಿ ಬಳ್ಳಿಗೆ ಸಿಕ್ಕು ಬಿದ್ದಿದ್ದ ಕರಡಿಯನ್ನು ಅರಣ್ಯ ಸಿಬ್ಬಂದಿಗಳು ಜೀವದ ಹಂಗು ತೊರೆದು ರಕ್ಷಿಸಿ ಸಮಯ ಪ್ರಜ್ಞೆ ಮೆರೆದಿದ್ದಾರೆ. ಕಾಡು ಬಳ್ಳಿಗೆ ಕೊರಳು ಸಿಲುಕಿಕೊಂಡು ಕರಡಿ ಕೂಗುತ್ತಿತ್ತು. ಗಸ್ತು ತಿರುಗುತ್ತಿದ್ದ ಅರಣ್ಯ ಸಿಬ್ಬಂದಿ ನೋಡಿ ಕರಡಿಯನ್ನು ಸಂರಕ್ಷಣೆ ಮಾಡಿದ್ದಾರೆ. ತಕ್ಷಣವೇ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು. ಪಶುವೈದ್ಯರು ಅರಣ್ಯ ರಕ್ಷಕರನ್ನ ಸ್ಥಳಕ್ಕೆ ಕರೆಸಿ, ಕರಡಿಗೆ ಅರಿವಳಿಕೆ ಮದ್ದು ನೀಡಿ ಕರಡಿಯನ್ನು ಬಚಾವ್ ಮಾಡಲಾಗಿದೆ‌. ಅಂದಹಾಗೆ, ಕರಡಿಗೆ ಎಚ್ಚರವಾಗುವ ಮುನ್ನವೇ ರಕ್ಷಿಸುವ ಕೆಲಸ ಮಾಡಿ ಸುರಕ್ಷಿತವಾಗಿ ಅರಣ್ಯಕ್ಕೆ ತೆರಳುವಂತೆ ವ್ಯವಸ್ಥೆ ಮಾಡಿದ್ದಾರೆ. 2 ವರ್ಷದ ಗಂಡು ಕರಡಿ ಇದಾಗಿದ್ದು, ರಕ್ಷಣೆ ನಂತರ ಕಾಡಿಗೆ ಮರಳಿದೆ. ಅರಣ್ಯ ಸಿಬ್ಬಂದಿ ಹಾಗೂ ಪಶುವೈದ್ಯರ ಈ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ