ಮನೆ ನಿರ್ಮಿಸುವವರಿಗೆ ತಾತ್ಕಾಲಿಕ ವ್ಯವಸ್ಥೆ: ಬಿಡಿಎ ಭರವಸೆ
ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ ಹಂಚಿಕೆಯಾಗಿರುವ ನಿವೇಶನದಾರರಿಗೆ ಅಗತ್ಯ ಸೌಲಭ್ಯ ಕಲ್ಪಿಸಲು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಬದ್ಧವಾಗಿದೆ' ಎಂದು ಪ್ರಾಧಿಕಾರದ ಎಂಜಿನಿಯರ್ ಸದಸ್ಯ ಶಾಂತ ರಾಜಣ್ಣ ತಿಳಿಸಿದ್ದಾರೆ.
ಬಡಾವಣೆಯಲ್ಲಿ ಭೂಸ್ವಾಧೀನ ಪ್ರಕ್ರಿಯೆಗೆ ಒಳಪಟ್ಟಿರುವ ಬಹುತೇಕ ಜಮೀನಿನ ಭೂಮಾಲೀಕರು ನ್ಯಾಯಾಲಯದಲ್ಲಿ ವಿವಿಧ ಕಾರಣಗಳಿಂದ ದಾವೆ ಹೂಡಿದ್ದು, ನ್ಯಾಯಾಲಯದಲ್ಲಿ ಪ್ರಾಧಿಕಾರದಿಂದ ವಕೀಲರನ್ನು ನೇಮಿಸಿ ಪರಿಣಾಮಕಾರಿ ವಾದ ಮಂಡಿಸಲಾಗಿದೆ.