ಲವ್ ಮಾಡದ ಮಹಿಳಾ ಪೊಲೀಸ್ ಅಧಿಕಾರಿಗೆ ಗುಂಡು ಹೊಡೆದ ಪಿಎಸ್ ಐ

ಶನಿವಾರ, 8 ಫೆಬ್ರವರಿ 2020 (20:59 IST)

ಪಿಎಸ್ ಐ ಒಬ್ಬರು ಲವ್ ಮಾಡುವಂತೆ ಪೀಡಿಸಿ ಕೊನೆಗೆ ಮಹಿಳಾ ಎಸ್ ಐ ಗೆ ಗುಂಡಿಕ್ಕಿ ಕೊಲೆ ಮಾಡಿರೋ ಘಟನೆ ನಡೆದಿದೆ.
 

ಪಿಎಸ್ ಐ ದೀಪಾಂಶು ರತಿ ಎಂಬುವರು ಮಹಿಳಾ ಎಸ್ ಐ ಪ್ರೀತಿ ಹಿಂದೆ ಬಿದ್ದಿದ್ದರು . ಲವ್ ಮಾಡು ಅಂತ ಹಾಗೂ ಮದುವೆ ಆಗೋಣ ಅಂತ ಕೇಳ್ತಿದ್ದರು.

ಇದಕ್ಕೆ ಪ್ರೀತಿ ನಿರಾಕರಿಸಿದ್ದರು. ಹೀಗಾಗಿ ಪಿಸ್ತೂಲ್ ನಿಂದ ಗುಂಡಿಕ್ಕಿ ಪ್ರೀತಿಯನ್ನು ದೀಪಾಂಶು ಕೊಲೆ ಮಾಡಿದ್ದಾರೆ. ದೆಹಲಿಯ ರೋಹಿಣಿ ಪ್ರದೇಶದಲ್ಲಿ ಘಟನೆ ನಡೆದಿದ್ದು, ಕೊಲೆ ಮಾಡಿದ ಬಳಿಕ ದೀಪಾಂಶು ತಾನೂ ಆತ್ಮಹತ್ಯೆಗೆ ಶರಣಾಗಿದ್ದಾನೆ.

 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ