ಡಾ. ರಾಜ್ ಕುಮಾರ್ ಫ್ಯಾಮಿಲಿ ಬಗ್ಗೆ ಹಗುರ ಮಾತನಾಡಿರೋ ಆರೋಪದಾಡಿ ಚಾಮರಾಜಪೇಟೆಯಲ್ಲಿ ಪುನೀತ್ ಕೆರೆಹಳ್ಳಿಗೆ ಧರ್ಮದೇಟು ಬಿದ್ದಿದೆ.ಚಾಮರಾಜಪೇಟೆಯಲ್ಲಿ ಘಟನೆ ನಡೆದಿದ್ದು,ಕನ್ನಡಪರ ಹೋರಾಟಗಾರ ಶಿವಕುಮಾರ್ ಟೀಂನಿಂದ ಏಟು ಬಿದ್ದಿದೆ.ಘಟನಾ ಸ್ಥಳಕ್ಕೆ ಚಾಮರಾಜಪೇಟೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ರಾತ್ರಿ 8.30ಕ್ಕೆ ಘಟನೆ ನಡೆದಿದ್ದು,ಇತ್ತೀಚೆಗೆ ಹೊಸಪೇಟೆಯಲ್ಲಿ ನಡೆದ ಘಟನೆ ಬಗ್ಗೆ ಪುನೀತ್ ಕೆರೆಹಳ್ಳಿ ಮಾತನಾಡಿದ್ದ.ಪುನೀತ್ ರಾಜ್ ಕುಮಾರ್ ಬಗ್ಗೆ ಹಗುರವಾಗಿ ಮಾತನಾಡಿದ್ದ .ಕ್ಷಮೆ ಕೇಳುವಂತೆ ಕೆರೆಹಳ್ಳಿಗೆ ಶಿವಕುಮಾರ್ ಟೀಂ ಒತ್ತಾಯಿಸಿದೆ.ಈ ವೇಳೆ ನಾನ್ಯಾಕೆ ಕ್ಷಮೆ ಕೇಳ್ಬೇಕು ಎಂದು ವಾದಾ ನಡೆದಿದೆ.ಈ ವೇಳೆ ಮಾತಿಗೆ ಮಾತು ಬೆಳೆದು ಕೆರೆಹಳ್ಳಿಗೆ ಧರ್ಮದೇಟು ಬಿದ್ದಿದೆ.ಸದ್ಯ ಘಟನಾ ಸ್ಥಳಕ್ಕೆ ಚಾಮರಾಜಪೇಟೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.