ಲಿಂಬಾವಳಿಯನ್ನು ಶಿಕ್ಷೆಗೆ ಒಳಪಡಿಸಿ
ಪ್ರದೀಪ್ ಹತ್ಯೆ ಕುರಿತು ಪ್ರತಿಕ್ರಿಯಿಸಿದ KPCC ಅಧ್ಯಕ್ಷ D.K. ಶಿವಕುಮಾರ್, BJP ಶಾಸಕರ ದುರ್ವರ್ತನೆಯಿಂದ ಅನೇಕ ಸಾವುಗಳಾಗುತ್ತಿದ್ದು, ಇದಕ್ಕೆ ಕೊನೆಹಾಡಬೇಕು. ಕಾನೂನು ಬದ್ಧವಾಗಿ ಹೋರಾಟ ಮಾಡಬೇಕಾಗಿದ್ದು, ಕಾನೂನಿನ ಶಿಕ್ಷೆಗೆ ಲಿಂಬಾವಳಿ ಒಳಗಾಗಲೇಬೇಕಿದೆ. ಪ್ರದೀಪ್ BJPಯವನು. ನಾವೇನಾದರೂ ಅವನ ಕೈಯಲ್ಲಿ ಡೆತ್ನೋಟ್ ಬರೆಸಿದ್ದೀವಾ?. ನಾವೇನಾದರೂ ಷಡ್ಯಂತ್ರದಲ್ಲಿ ಭಾಗಿಯಾಗಿದ್ದೀವಾ?. ನಾವ್ಯಾರು ಇದರಲ್ಲಿ ಭಾಗಿಯಾಗಿಲ್ಲ. ಎಲ್ಲರಿಗೂ ಕಾನೂನು ಇದೆ. ಅದರಂತೆ ತನಿಖೆಗೊಳಗಾಗಬೇಕು, ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಎಂದು ಪ್ರದೀಪ್ ಸಾವಿನ ತನಿಖೆಗೆ ಡಿಕೆಶಿ ಒತ್ತಾಯ ಮಾಡಿದ್ದಾರೆ.