ರಾಗಿ ಖರೀದಿಗೆ ಸ್ಥಗಿತ- ಪರದಾಡಿದ ರೈತರು
ಸರ್ಕಾರವು 2ನೇ ಬಾರಿಗೆ ಕನಿಷ್ಠ ಬೆಂಬಲ ಬೆಲೆ ಯೋಜನೆ ಅಡಿಯಲ್ಲಿ ರಾಗಿ ಖರೀದಿ ನೋಂದಣಿ ಆರಂಭಿಸಿದ್ದು, ತಾಂತ್ರಿಕ ದೋಷದಿಂದ ರಾಗಿ ಖರೀದಿ ಸ್ಥಗಿತಗೊಂಡು ರಾತ್ರಿಯಿಡಿ ರೈತರು ಪರದಾಡಿದ ಘಟನೆ ಬೆಳಕಿಗೆ ಬಂದಿದೆ. ಮೈಸೂರಿನ ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರ ಗ್ರಾಮದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಆವರಣದಲ್ಲಿ.ಸ ಸರ್ಕಾರ 2ನೇ ಬಾರಿಗೆ ರಾಗಿ ಖರೀದಿಸಲು ಸೋಮವಾರದಿಂದ ರೈತರಿಂದ ನೋಂದಾಣಿ ಪ್ರಾರಂಭ ಮಾಡಿದೆ. ಆದ್ರೆ ಸೋಮವಾರದಿಂದಲೂ ತಾಂತ್ರಿಕ ಕಾರಣ ಎದುರಾದ ಹಿನ್ನೆಲೆ ಸಾವಿರಾರು ರೈತರು ಕೃಷಿ ಉತ್ಪನ್ನ ಮಾರುಕಟ್ಟೆ ಆವರಣದಲ್ಲಿ ಬೀಡುಬಿಟ್ಟಿದ್ದಾರೆ. ಮಂಗಳವಾರವೂ ಇದೇ ಸಮಸ್ಯೆ ಎದುರಾಗಿದ್ದು, ರಾತ್ರಿ 9 ಗಂಟೆಗೆ ಆನ್ಲೈನ್ ಸರಿಯಾಗಬಹುದು ಎಂಬ ವದಂತಿ ಹಿನ್ನೆಲೆ ಅಮಾಯಕ ರೈತರು ರಾತ್ರಿಯಿಡಿ ಸರತಿ ಸಾಲಿನಲ್ಲಿ ನಿಂತಿದ್ದಾರೆ.