ಶ್ರೀಗಂಧದ ಸುವಾಸನೆಗೆ ಮಾರು ಹೋಗದವರು ಯಾರಿಲ್ಲ ಹೇಳಿ,
ಶ್ರೀಗಂಧ ತೈಲಗೆ ಬಹುಬೇಡಿಕೆ ಶ್ರೀಗಂಧದ ಮರಗಳನ್ನು ನಾವು ಕಾಣಬಹುದು.. ದಶಕಗಳ ಪೂರೈಸಿರುವ ಈ ಶ್ರೀಗಂಧದ ಮರಗಳು ಬಹುತೇಕ ಸರ್ಕಾರಿ ಆವರಣಗಳಲ್ಲಿವೆ.
ವಿಧಾನಸೌಧ ಸುತ್ತಮುತ್ತ, ಮುಖ್ಯ ಕಾರ್ಯದರ್ಶಿಗಳ ಮನೆ ಆವರಣ, ಮುಖ್ಯ ನ್ಯಾಯಮೂರ್ತಿಗಳ ನಿವಾಸ, ಮುಖ್ಯಮಂತ್ರಿಗಳು ಸೇರಿದಂತೆ ಸಚಿವರ ಗೆಸ್ಟ್ ಹೌಸ್, ಇಂಡಿಯನ್ ಇನ್ಸಿಟಿಟ್ಯೂಟ್ ಆಫ್ ಸೈನ್ಸ್, ಗಾಲ್ಫ್ ಕೊರ್ಸ್ ಹೀಗೆ ಸಾಕಷ್ಟು ಕಡೆ ಶ್ರೀಗಂಧದ ಮರಗಳನ್ನು ನಾವು ಕಾಣಬಹುದು.. ಆಗಾಗ ತಮಿಳುನಾಡು, ಆಂಧ್ರ, ಕೇರಳ ಮೂಲದ ಶ್ರೀಗಂಧದ ಮರಗಳ್ಳರು ನಗರಕ್ಕೆ ಆಗಮಿಸಿ ರಾತ್ರೋರಾತ್ರಿ ಮರಗಳನ್ನು ಅಲ್ಲೊಬ್ಬ ಇಲ್ಲೊಬ್ಬ ಕಳವು ಮಾಡುವಂತದ್ದು, ಬೆಂಗಳೂರು ಪೊಲೀಸರಿಗೆ ಸಿಕ್ಕಿ ಬಿದ್ದು ಜೈಲಿಗೆ ಹೊಗುವುದು ನೋಡುತ್ತಿದ್ದೆವು.
ರಾತ್ರಿ ವೇಳೆ ಜನರ ಓಡಾಟ, ಪೊಲೀಸರ ಗಸ್ತು ಕಡಿಮೆ ಜೊತೆಗೆ ಮಳೆ ಬೀಳುತಿದ್ದಾಗ ಸಾಕಷ್ಟು ಮರಗಳು ಬಿದ್ದಾಗ ಯಾರ ಗಮನಕ್ಕೂ ಬರುತ್ತಿರಲಿಲ್ಲ.. ಈ ಎಲ್ಲಾ ಅಂಶಗಳನ್ನು ಬಳಸಿಕೊಂಡು ಪಕ್ಕಾ ಪ್ರೊಫೆಷನಲ್ ಮರಗಳ್ಳರ ಗ್ಯಾಂಗ್ ವೊಂದು ಶ್ರೀಗಂಧದ ಮರಗಳನ್ನು ಕಳವು ಮಾಡುತಿದ್ದು.