ಪುಂಡರಿಗೆ ಖಡಕ್ ಡೆಡ್‌ಲೈನ್‌?

ಬುಧವಾರ, 20 ಏಪ್ರಿಲ್ 2022 (08:16 IST)
ಹುಬ್ಬಳ್ಳಿ : ನಾಪತ್ತೆಯಾಗಿರುವ ವಾಸೀಂ ಸೇರಿ 8 ಆರೋಪಿಗಳಿಗೆ ಪೊಲೀಸರು ಡೆಡ್ಲೈನ್ ನೀಡಿದ್ದಾರೆ.

ಇಂದು ಸಂಜೆಯೊಳಗೆ ಶರಣಾಗದಿದ್ದರೆ ಮುಂದಿನ ಪರಿಣಾಮಕ್ಕೆ ನೀವೇ ಹೊಣೆ ಎಂದು ಖಡಕ್ ಸಂದೇಶ ರವಾನಿಸಿದ್ದಾರೆ.

ಹುಬ್ಬಳ್ಳಿಯಲ್ಲಿ ಶಾಂತಿ ಕದಡಿದ ಆರೋಪಿಗಳ ಪತ್ತೆಗೆ ಪೊಲೀಸರು ಬೆಳಗಾವಿ, ಹಾವೇರಿ, ಹೈದರಾಬಾದ್ಗೆ ತೆರಳಿದ್ದಾರೆ. ಗಲಭೆಗೆ 4 ಮಂದಿ ಪ್ರಚೋದನೆ ನೀಡಿದ್ದು ಇವರೇ ಗಲಭೆಗೆ ನೇರ ಕಾರಣ ಎಂಬ ತೀರ್ಮಾನಕ್ಕೆ ಪೊಲೀಸರು ಬಂದಿದ್ದಾರೆ.

ಹುಬ್ಬಳ್ಳಿ ಗಲಭೆಕೋರರ ಬಂಧನಕ್ಕೆ ಖಾಕಿಪಡೆ ತೀವ್ರಶೋಧಕಾರ್ಯ ನಡೆಸುತ್ತಿದೆ. ದಿನದಿಂದ ದಿನಕ್ಕೆ ಆರೋಪಿಗಳ ಸಂಖ್ಯೆ ಸಹ ಏರಿಕೆಯಾಗುತ್ತಿದೆ. ಇದಕ್ಕೆ ರಾಜಕೀಯ ರೂಪ ಬೆರೆತಿದ್ದು, ಬಂಧಿತರಲ್ಲಿ ಅಮಾಯಕರಿದ್ದಾರೆ ಎಂದು ರಾಜಕೀಯ ನಾಯಕರು ಮತ್ತು ಕುಟುಂಬಸ್ಥರು ಹೇಳುತ್ತಿದ್ದಾರೆ.

ಈ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ಅಮಾಯಕರ ಪತ್ತೆಗೂ ಸಹ ಹಲವಾರು ಮಾರ್ಗಗಳನ್ನು ಪ್ಲಾನ್ ಮಾಡಿದೆ. ಈವರೆಗೆ 108 ಮಂದಿ ಬಂಧಿತರಾಗಿದ್ದು ಅವರಲ್ಲಿ ಅಮಾಯಕರನ್ನು ಬಿಡುಗಡೆ ಮಾಡಲು ಸಿಸಿಟಿವಿ ಮತ್ತು ಮೊಬೈಲ್ ವಿಡಿಯೋ ಮೂಲಕ 4 ಫಾರ್ಮುಲಾವನ್ನು ಪೊಲೀಸರು ಅಳವಡಿಸಿಕೊಂಡಿದ್ದಾರೆ.

ಗಲಾಟೆಯ ದಿನ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಭಾಗಿಯಾದವರು. ಘಟನೆ ನೋಡುತ್ತಾ ನಿಂತವರು, ಪೊಲೀಸರ ಲಾಠಿ ಚಾರ್ಜ್ ವೇಳೆ ಓಡಿಹೋದವರು ಪತ್ತೆಯಾಗಿದ್ದು ಈ ಬಗ್ಗೆ ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ. ಹೀಗಾಗಿ ಇವರನ್ನು ಬಿಡುಗಡೆ ಮಾಡುವ ಸಾಧ್ಯತೆಯಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ