ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾಗಲೇಬೇಕು. ಹೀಗಂತ ಒತ್ತಾಯ ಮತ್ತೆ ಕೇಳಿಬರತೊಡಗಿದೆ.
ಉಡುಪಿ ಪೇಜಾವರ ಮಠದ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿ ಈ ಹೇಳಿಕೆ ನೀಡಿದ್ದಾರೆ.
ಮಂಗಳೂರುನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶ್ರೀ ವಿಶ್ವೇಶ್ವ ತೀರ್ಥ ಸ್ವಾಮೀಜಿ, ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಆಗಲೇಬೇಕು ಎಂಬುದು ನನ್ನ ಆಗ್ರಹವಾಗಿದೆ. ಈಗ ಕೇಂದ್ರ ಸರಕಾರಕ್ಕೆ ಲೋಕ ಸಭೆಯಲ್ಲಿ ಸಂಖ್ಯಾ ಬಲವಿದೆ.
ಕೆಲವೇ ತಿಂಗಳುಗಳಲ್ಲಿ ರಾಜ್ಯ ಸಭೆಯಲ್ಲಿ ಬಹುಮತ ದೊರೆಯಲಿದೆ. ಆ ಬಳಿಕ ಸಂಸತ್ತಿನಲ್ಲಿ ಈ ಬಿಲ್ ಪಾಸ್ ಅಗಬಹುದೆಂದು ಹೇಳಿದ್ರು. ಕೇಂದ್ರ ಬಜೆಟ್ ಜನಪರವಾಗಿ ಮೂಡಿ ಬಂದಿದೆ ಎಂದು ಆಶಾಭಾವನೆ ವ್ಯಕ್ತಪಡಿಸಿದ್ರು.
ಗೋ ಹತ್ಯಾ ನಿಷೇಧ ಕಾನೂನು ಕೂಡಾ ಜಾರಿಗೆ ತರಲಿ ಎಂದು ಒತ್ತಾಯಿಸಿದ್ರು. ಪೇಜಾವರ ಮಠದ ವತಿಯಿಂದ ಶಿವಮೊಗ್ಗದಲ್ಲಿ ಹಿಂದುಳಿದ ವಿದ್ಯಾರ್ಥಿಗಳ ಹಾಸ್ಟೆಲ್, ಹುಬ್ಬಳ್ಳಿಯಲ್ಲಿ ಶಾಲೆಯೊಂದನ್ನು ತೆರೆಯಲಾಗುವುದು ಎಂದು ಹೇಳಿದ್ರು.