ಶೀಘ್ರದಲ್ಲಿಯೇ ಮಂತ್ರಿಮಂಡಲಕ್ಕೆ ಸೇರಿಕೊಳ್ಳಲಿರುವ ಆರ್.ಶಂಕರ್

ಮಂಗಳವಾರ, 4 ಫೆಬ್ರವರಿ 2020 (10:19 IST)
ಬೆಂಗಳೂರು : ಶೀಘ್ರದಲ್ಲಿಯೇ ನಿಮ್ಮನ್ನ ಮಂತ್ರಿಯಾಗಿಸುವುದಾಗಿ ಸಿಎಂ ಯಡಿಯೂರಪ್ಪ ಆರ್.ಶಂಕರ್ ಅವರಿಗೆ ಭರವಸೆ ನೀಡಿದ್ದಾರೆ ಎನ್ನಲಾಗಿದೆ.


ಇಂದು ಬೆಳಿಗ್ಗೆ ಡಾಲರ್ಸ್ ಕಾಲೋನಿಯಲ್ಲಿರುವ ಸಿಎಂ ನಿವಾಸಕ್ಕೆ ಪತ್ನಿ, ಮತ್ತು ಪುತ್ರನ ಜೊತೆ ಭೇಟಿ ನೀಡಿದ ಆರ್.ಶಂಕರ್ ಸಿಎಂ ಜೊತೆ ಮಾತನಾಡಿ ತಮ್ಮನ್ನು ಎಂಎಲ್ ಸಿ ಮಾಡುವಣತೆ ಮನವಿ ಮಾಡಿದ್ದಾರೆ ಎನ್ನಲಾಗಿದೆ.


ಇದಕ್ಕೆ ಪ್ರತಿಕ್ರಿಯಿಸಿದ ಸಿಎಂ ಶೀಘ್ರದಲ್ಲಿಯೇ ನಿಮ್ಮನ್ನ ಮಂತ್ರಿಮಂಡಲಕ್ಕೆ ಸೇರಿಸಿಕೊಳ್ಳುತ್ತೇನೆ. ಸ್ವಲ್ಪ ತಾಳ್ಮೆಯಿಂದ ಇರಿ. ನಿಮಗೆ ಯಾವುದೇ ಕಾರಣಕ್ಕೂ ಅನ್ಯಾಯ ಮಾಡುವುದಿಲ್ಲ. ನಾನು ಹಿಂದೆ ಕೊಟ್ಟ ಮಾತಿನಂತಿಯೇ ನಡೆದುಕೊಳ್ಳುತ್ತೇನೆ ಎಂದು ಭರವಸೆ ನೀಡಿದ್ದಾರೆ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ