ಜಮೀರ್ ಅಹ್ಮದ್ ಗೆ ರಾಧಿಕಾ ಕುಮಾರಸ್ವಾಮಿ ಸಾಲ: ಲೋಕಾಯುಕ್ತರಿಂದ ವಿಚಾರಣೆ

Krishnaveni K

ಸೋಮವಾರ, 1 ಸೆಪ್ಟಂಬರ್ 2025 (10:40 IST)
ಬೆಂಗಳೂರು: ಸಚಿವ ಜಮೀರ್ ಅಹ್ಮದ್ ಗೆ 2.5 ಕೋಟಿ ರೂ. ಸಾಲ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ರಾಧಿಕಾ ಕುಮಾರಸ್ವಾಮಿ ಲೋಕಾಯಕ್ತ ವಿಚಾರಣೆ ಎದುರಿಸಿದ್ದಾರೆ.

ಸಚಿವ ಜಮೀರ್ ಅಹ್ಮದ್ ವಿರುದ್ಧ ಅಕ್ರಮ ಆಸ್ತಿ ಗಳಿಕೆ ಪ್ರಕರಣವಿದೆ. ಇದಕ್ಕೆ ಸಂಬಂಧಿಸಿದಂತೆ ಈಗಾಗಲೇ ಅವರು ಲೋಕಾಯುಕ್ತಕ್ಕೆ ದಾಖಲೆ ಸಲ್ಲಿಸಿದ್ದಾರೆ. ಈ ದಾಖಲೆಗಳ ಪರಿಶೀಲನೆ ಮಾಡಿದಾಗ ಜಮೀರ್ ಗೆ ಸಾಲ ಕೊಟ್ಟವರ ಪಟ್ಟಿ ಸಿಕ್ಕಿದೆ.

ಈ ಪೈಕಿ ರಾಧಿಕಾ ಕುಮಾರಸ್ವಾಮಿಯವರಿಂದ 2.5 ಕೋಟಿ ರೂ. ಸಾಲ ಪಡೆದುಕೊಂಡ ಮಾಹಿತಿ ಸಿಕ್ಕಿದೆ. ಈ ಸಂಬಂಧ ಲೋಕಾಯುಕ್ತ ಪೊಲೀಸರು ವಿಚಾರಣೆ ನಡೆಸಿದ್ದು ರಾಧಿಕಾ ಕೂಡಾ ಸಾಲ ಕೊಟ್ಟಿದ್ದನ್ನು ಒಪ್ಪಿಕೊಂಡಿದ್ದಾರೆ. ಶಮಿಕಾ ಎಂಟರ್ ಪ್ರೈಸಸ್ ಹೆಸರಿನಲ್ಲಿ ನಿರ್ಮಾಣ ಸಂಸ್ಥೆ ಮಾಡಿ ಎರಡು ಸಿನಿಮಾ ನಿರ್ಮಿಸಿದ್ದ ರಾಧಿಕಾ ಈ ಸಿನಿಮಾದ ಸ್ಯಾಟ್ ಲೈಟ್ ಹಕ್ಕು ಸೇರಿದಂತೆ ಬಂದ ಲಾಭದಿಂದ ಆಗ ಆರ್ಥಿಕ ಸಂಕಷ್ಟದಲ್ಲಿದ್ದ ಜಮೀರ್ ಅಹ್ಮದ್ ಗೆ 2.5 ಕೋಟಿ ರೂ. ಸಾಲ ಕೊಟ್ಟಿದ್ದಾಗಿ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ