ರಫೆಲ್ ಡೀಲ್: ಸಿಪಿಐ ಪ್ರತಿಭಟನೆ

ಬುಧವಾರ, 24 ಅಕ್ಟೋಬರ್ 2018 (17:00 IST)
ರಫೆಲ್ ಹಗರಣದ ತನಿಖೆಯನ್ನು ಸಂಸದೀಯ ಜಂಟಿ ಸಮಿತಿಗೆ ಒಪ್ಪಿಸಲು ಆಗ್ರಹಿಸಿ ಸಿಪಿಐ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ.

ಕಲಬುರಗಿಯಲ್ಲಿ ಸಿಪಿಐ ಕಾರ್ಯಕರ್ತರು ಹಕ್ಕೊತ್ತಾಯ ಚಳುವಳಿ ಮಾಡಿದರು. ದೇಶದ ಬಹುದೊಡ್ಡ ಹಗರಣದಲ್ಲೊಂದಾದ ರಫೆಲ್ ಹಗರಣ ತನಿಖೆಗಾಗಿ ಸಂಸದೀಯ ಜಂಟಿ ಸಮಿತಿಗೆ ಒಪ್ಪಿಸಬೇಕೆಂದು ಒತ್ತಾಯಿಸಿದರು. ರಾಷ್ಟ್ರವ್ಯಾಪ್ತಿ ಸಿಪಿಐ ಪಕ್ಷದ ನೇತೃತ್ವದಲ್ಲಿ ಹಕ್ಕೊತ್ತಾಯ ಚಳುವಳಿ ನಡೆದಿದ್ದು, ಈ ಹಿನ್ನಲೆ ಕಲಬುರಗಿಯಲ್ಲಿ ರೈಲ್ವೆ ನಿಲ್ದಾನ ಬಳಿಯ ಅಂಚೆ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಯಿತು. ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದರು.

'ನಾನು ತಿನ್ನುವದಿಲ್ಲ ತಿನ್ನಲು ಬಿಡುವದಿಲ್ಲ' ಅಂತ ಹೇಳುತ್ತಲೇ ಯುದ್ಧ ವಿಮಾನಗಳ ಖರೀದಿಯಲ್ಲಿ ಭಾರಿ ಭ್ರಷ್ಟಾಚಾರವೆಸಗಿದ್ದಾರೆಂದು ಆರೋಪಿಸಿದರು. ಜನರು ಕಟ್ಟಿದ ತೆರಿಗೆಯನ್ನು ಭ್ರಷ್ಟಾಚಾರದ ಮೂಲಕ ಕೊಳ್ಳೆ ಹೊಡೆಯಲಾಗಿದೆ ಈ ಬಗ್ಗೆ ತನಿಖೆ ನಡೆದು ಹಗರಣ ಬಯಲಿಗೆಳೆಯಬೇಕೆಂದು ಒತ್ತಾಯಿಸಿದರು.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ