ರಾಹುಲ್ ಗಾಂಧಿ ಎಲ್ಲರನ್ನೂ ಒಂದುಗೂಡಿಸಿಕೊಂಡು ಬರುತ್ತಿದ್ದಾರೆ : ಡಿಕೆಶಿ

ಮಂಗಳವಾರ, 27 ಸೆಪ್ಟಂಬರ್ 2022 (09:55 IST)
ಚಾಮರಾಜನಗರ : ರಾಹುಲ್ ಗಾಂಧಿ ಐರನ್ ಲೆಗ್, ಬಿಜೆಪಿಗೆ ಇದರಿಂದ ಲಾಭ ಎಂಬ ಬಿಜೆಪಿಗರ ವ್ಯಂಗ್ಯಕ್ಕೆ ಕಾಂಗ್ರೆಸ್ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು,

ರಾಹುಲ್ ಗಾಂಧಿ ಕಬ್ಬಿಣದ ಸೂಜಿ ಇದ್ದಂತೆ ಎಲ್ಲರನ್ನೂ ಒಂದುಗೂಡಿಸಿಕೊಂಡು ಬರುತ್ತಿದ್ದಾರೆ, ಬಿಜೆಪಿಗರು ಕತ್ತರಿ ಇದ್ದಂತೆ ಎಲ್ಲರನ್ನು ಇಬ್ಭಾಗ ಮಾಡುತ್ತಿದ್ದಾರೆ, ನಾವು ಒಗ್ಗೂಡಿಸುವ ಕೆಲಸ ಮಾಡುತ್ತಿದ್ದೇವೆ ಎಂದು ಕಿಡಿಕಾರಿದ್ದಾರೆ.

ಇದೇ 30 ರಿಂದ ರಾಜ್ಯದಲ್ಲಿ ಆರಂಭಗೊಳ್ಳುವ ಭಾರತ್ ಜೋಡೋ ಯಾತ್ರೆಯ ಮಾರ್ಗವನ್ನು ಡಿ.ಕೆ.ಶಿವಕುಮಾರ್ ಹಾಗೂ ಕರ್ನಾಟಕ ಉಸ್ತುವಾರಿ ರಣದೀಪ್ ಸುರ್ಜೇವಾಲ, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಹರಿಪ್ರಸಾದ್ ಪರಿಶೀಲನೆ ನಡೆಸಿದರು.

ಯಾತ್ರೆ ಆರಂಭಗೊಳ್ಳುವ ಗುಂಡ್ಲುಪೇಟೆಯ ಅಂಬೇಡ್ಕರ್ ಭವನ ರಸ್ತೆ, ನಂಜನಗೂಡು ರಸ್ತೆ ಮತ್ತು ಬದನವಾಳು ಖಾದಿ ಕೇಂದ್ರಕ್ಕೆ ಕೈಪಡೆ ನಾಯಕರುಗಳು ಭೇಟಿ ನೀಡಿ ಭಾರತ್ ಜೋಡೋ ಯಾತ್ರೆಗಾಗಿ ಸಜ್ಜುಗೊಳ್ಳುತ್ತಿದ್ದಾರೆ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ