ರಾಹುಲ್ ಗಾಂಧಿ ಟ್ವಿಟರ್ ‘ಸಾಧನೆ’ಗೆ ರಮ್ಯಾ ಕಾರಣವೇ?
ಮಾಧ್ಯಮವೊಂದರ ವರದಿ ಪ್ರಕಾರ ರಾಹುಲ್ ಗಾಂಧಿ ಇದೀಗ ಟ್ವಿಟರ್ ಜನಪ್ರಿಯತೆಯಲ್ಲಿ ಪ್ರಧಾನಿ ಮೋದಿಯವರನ್ನೂ ಹಿಂದಿಕ್ಕಿದ್ದಾರೆ. ಕಳೆದ ಒಂದು ವಾರದಲ್ಲಿ ರಾಹುಲ್ ಮಾಡಿದ ಟ್ವೀಟ್ ಗಳು ಅತೀ ಹೆಚ್ಚು ರಿಟ್ವೀಟ್ ಆಗಿದೆ. ಈ ವಿಷಯದಲ್ಲಿ ರಾಹುಲ್ ಪ್ರಧಾನಿ ಮೋದಿ ಮತ್ತು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ರನ್ನೂ ಹಿಂದಿಕ್ಕಿದ್ದಾರೆ. ಸದ್ಯ ಸೋತು ಸೊರಗಿರುವ, ಗೆಲುವಿನ ಹೊಸ ಹಾದಿ ಹುಡುಕುತ್ತಿರುವ ಕಾಂಗ್ರೆಸ್ ಗೆ ಇದು ದೊಡ್ಡ ಬೂಸ್ಟ್. ರಮ್ಯಾರ ಈ ಸಾಧನೆಗೆ ಅವರಿಗೆ ಪಕ್ಷದಲ್ಲಿ ಇನ್ನೂ ಹೆಚ್ಚಿನ ಜವಾಬ್ದಾರಿ ಸಿಕ್ಕಿದರೂ ಅಚ್ಚರಿಯೇನಿಲ್ಲ.