ಶ್ರೀನಗರದ ಲಾಲ್ ಚೌಕ್‌ನ ಐತಿಹಾಸಿಕ ಕ್ಲಾಕ್ ಟವರ್‌ನಲ್ಲಿ ಭಾರಿ ಭದ್ರತೆಯ ನಡುವೆ ರಾಹುಲ್ ಅವರು ತ್ರಿವರ್ಣ ಧ್ವಜಾರೋಹಣ ಮಾಡಿದ್ದಾರೆ.ಈ ಸಂದರ್ಭದಲ್ಲಿ ರಾಹುಲ್ ಅವರೊಂದಿಗೆ ಸಹೋದರಿ, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಮತ್ತು ಜಮ್ಮು ಮತ್ತು ಕಾಶ್ಮೀರ ಕಾಂಗ್ರೆಸ್‌ನ ಪ್ರಮುಖ ಮುಖಂಡರು ಇದ್ದರು.
ಈ ಕುರಿತು ಮಾಹಿತಿ ನೀಡಿದ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ , ಬೇರೆ ಎಲ್ಲೂ ಅನುಮತಿ ದೊರಕದ ಕಾರಣ ರಾಹುಲ್ ಗಾಂಧಿ ಅವರು ಜನವರಿ 30ರಂದು ಪಿಸಿಸಿ ಕಚೇರಿ ಮುಂಭಾಗದಲ್ಲಿ ರಾಷ್ಟ್ರ ಧ್ವಜಾರೋಹಣ ಮಾಡಬೇಕಿತ್ತು. ಆದರೆ ಇಂದೇ ಲಾಲ್ ಚೌಕ್‌ನಲ್ಲಿ ತ್ರಿವರ್ಜ ಧ್ವಜ ಹಾರಿಸಲು ಸ್ಥಳೀಯ ಆಡಳಿತವು ಶನಿವಾರ ಸಂಜೆ ಅನುಮತಿಯನ್ನು ನೀಡಿತು ಎಂದು ಹೇಳಿದರು.
ಪ್ರಧಾನಿಗೆ ಸಮಾನವಾದ ಭದ್ರತೆ ವ್ಯವಸ್ಥೆಯನ್ನು ರಾಹುಲ್ ಅವರ ರಾಷ್ಟ್ರ ಧ್ವಜಾರೋಹಣ ಕಾರ್ಯಕ್ರಮಕ್ಕೆ ಏರ್ಪಡಿಸಲಾಗಿತ್ತು. 10 ನಿಮಿಷಗಳ ಈ ಕಾರ್ಯಕ್ರಮಕ್ಕೆ ಲಾಲ್ ಚೌಕ್ ಹೋಗುವ ಒಂದು ಕಿ.ಮೀ. ವ್ಯಾಪ್ತಿಯಲ್ಲಿ ವಾಹನ ಸಂಚಾರವನ್ನು ತಡೆ ಹಿಡಿಯಲಾಯಿತು. ಬ್ಯಾರಿಕೇಡ್ ಸ್ಥಾಪಿಸಿ, ಭದ್ರತಾ ಸಿಬ್ಬಂದಿ ನಿಯೋಜಿಸಲಾಯಿತು. ಅಂಗಡಿ, ವ್ಯಾಪಾರ ಮಳಿಗೆಗಳನ್ನು ಮುಚ್ಚಗಡೆಗೊಳಿಸಲಾಯಿತು.