ಮಳೆಯ ರೌದ್ರಾವತಾರ: ಜನ ತತ್ತರ
ಮಳೆಯ ಭಯಾನಕ ಆರ್ಭಟ ದೇವರ ನಾಡಿನಲ್ಲಿ ಮುಂದುವರಿದಿದೆ. ಮಳೆಯ ಕಾಟಕ್ಕೆ ಮೃತರ ಸಂಖ್ಯೆ ಈವರೆಗೂ 150ಕ್ಕೂ ಹೆಚ್ಚಿಗೆ ದಾಖಲಾಗಿದೆ.
ಕೇರಳದಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಗೆ ಜನಜೀವನ ತತ್ತರಗೊಂಡಿದೆ. ಜೀವಹಾನಿ ಸಂಖ್ಯೆ ಏರುತ್ತಿದೆ. ಈವರೆಗೂ ಮಳೆಯಿಂದಾಗಿ 170ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. 1.50 ಲಕ್ಷಕ್ಕೂ ಹೆಚ್ಚು ಜನರನ್ನು ನಿರಾಶ್ರಿತರ ಶಿಬಿರಗಳಿಗೆ ಸ್ಥಳಾಂತರಿಸಲಾಗಿದೆ. ಬಹುತೇಕ ಪ್ರದೇಶಗಳು ಜಲಾವೃತಗೊಂಡಿವೆ.
ನದಿ ಪಾತ್ರ ಉಕ್ಕಿ ಹರಿಯುತ್ತಿರುವುದರಿಂದ ಮನೆ ಕುಸಿತ, ಗುಡ್ಡ ಕುಸಿತ ಪ್ರಕರಣ ಕಂಡುಬರುವುದು ಮುಂದುವರಿದಿವೆ. 14ರ ಪೈಕಿ 13 ಜಿಲ್ಲೆಗಳಲ್ಲಿ ಹೈ ಅಲರ್ಟ ಜಿಲ್ಲೆಗಳಾಗಿ ಘೋಷಣೆ ಮಾಡಲಾಗಿದೆ. ಮಳೆಯಿಂದ ಹಾನಿಗೊಳಗಾದ ಜನರನ್ನು ಸಂರಕ್ಷಿಸುವ ಕಾರ್ಯ ನಿರಂತರವಾಗಿ ಮುಂದುವರಿದಿದೆ.