ಕಳೆದ 18 ವರ್ಷಗಳಿಂದ ರಾಜ್ಯದಿಂದ ವೆಂಕಯ್ಯ ನಾಯ್ಡು ರಾಜ್ಯಸಭೆಗೆ ಆಯ್ಕೆಯಾಗುತ್ತಿದು, ಇವರು ಕರ್ನಾಟಕ ರಾಜ್ಯದ ನೆಲ, ಜಲ, ಭಾಷೆ ಕುರಿತು ಯಾವುತ್ತು ಧ್ವನಿ ಎತ್ತಿಲ್ಲ ಎಂದು ಕನ್ನಡ ಸಂಘಟನೆಗಳು ವಿರುದ್ಧ ವ್ಯಕ್ತಪಡಿಸಿರುವ ಬೆನ್ನಲ್ಲೆ ಬಿಜೆಪಿ ಪಾಳಯದಲ್ಲಿ ಹಠಾತ್ ಬೆಳವಣಿಗೆ ಕಂಡು ಬಂದಿದ್ದು, ರಾಜ್ಯಸಭೆ ಚುನಾವಣೆಗೆ ವೆಂಕಯ್ಯ ನಾಯ್ಡು ಬದಲು ನಿರ್ಮಲಾ ಸೀತಾರಾಮನ್ ಅವರ ಹೆಸರು ಕೇಳಿಬರುತ್ತಿದೆ.
ರಾಜ್ಯಸಭೆ ಚುನಾವಣೆಗೆ ಸ್ಪರ್ಧಿಸಲು ಮೊದಲ ಅಭ್ಯರ್ಥಿಯಾಗಿ ವಿ.ಸೋಮಣ್ಣ ಅವರ ಹೆಸರು ಆಯ್ಕೆಯಾಗಿದ್ದು, ಎರಡನೇಯ ಹೆಸರು ಘೋಷಣೆ ಬಾಕಿ ಇದೆ. ಇದೀಗ, ಬಿಜೆಪಿ ಪಕ್ಷದ ಎರಡನೇಯ ಅಭ್ಯರ್ಥಿಯಾಗಿ ನಿರ್ಮಲಾ ಸೀತಾರಾಮನ್ ಅವರ ಹೆಸರು ಅಂತಿಮವಾಗುವ ಸಾಧ್ಯತೆಗಳಿವೆ.