ರಾಕೇಶ್ ಅಂತ್ಯ ಸಂಸ್ಕಾರ: ದರ್ಶನ ಸಿಗದಿದ್ದರಿಂದ ಆತ್ಮಹತ್ಯೆಗೆ ಯತ್ನಿಸಿದ ಅಭಿಮಾನಿ

ಸೋಮವಾರ, 1 ಆಗಸ್ಟ್ 2016 (16:04 IST)
ಸಿಎಂ ಜೇಷ್ಠಪುತ್ರ ರಾಕೇಶ್ ಪಾರ್ಥಿವ ಶರೀರದ ಅಂತಿಮ ದರ್ಶನ ದೊರೆಯಲಿಲ್ಲ ಎಂದು ಮನನೊಂದು ಅಭಿಮಾನಿಯೊಬ್ಬ ಕಂಬಕ್ಕೆ ತಲೆ ಜಜ್ಜಿಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ವರದಿಯಾಗಿದೆ.
 
ಬಹು ಅಂಗಾಂಗ ವೈಫಲ್ಯದಿಂದ ಬೆಲ್ಜಿಯಂ ರಾಷ್ಟ್ರದಲ್ಲಿ ನಿಧನರಾದ ಸಿಎಂ ಸಿದ್ದರಾಮಯ್ಯ ಜೇಷ್ಠಪುತ್ರ ರಾಕೇಶ್ ಅವರ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕಾಗಿ ಮೈಸೂರಿನ ದಸರಾ ವಸ್ತು ಪ್ರದರ್ಶನ ಪ್ರಾಧಿಕಾರದ ಆವರಣದಲ್ಲಿ ಅವಕಾಶ ನೀಡಲಾಗಿದ್ದು, ರಾಕೇಶ್ ಅವರ ಅಂತಿಮ ದರ್ಶನ ದೊರೆಯಲಿಲ್ಲ ಎಂಬ ಕಾರಣಕ್ಕಾಗಿ ರಾಯನಹುಂಡಿ ಗ್ರಾಮದ ಮಹೇಶ್ ಎಂಬಾತ ಕಂಬಕ್ಕೆ ತಲೆ ಜಜ್ಜಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ ಎಂದು ಹೇಳಲಾಗುತ್ತಿದೆ.
 
ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡಿರುವ ಮಹೇಶ್‌ನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ