ರೀಲ್ಸ್ ಮಾಡಿ ರಮ್ಯ ರಂಜನೆ
ಸ್ಯಾಂಡಲ್ವುಡ್ ಕ್ವೀನ್ ನಟಿ ರಮ್ಯಾ ಇತ್ತೀಚಿನ ದಿನಗಳಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಮತ್ತೆ ಆಕ್ಟೀವ್ ಆಗಿದ್ದಾರೆ. ಕೆಲ ದಿನಗಳ ಹಿಂದೆಯಷ್ಟೇ ಸಂಗಾತಿ ಕುರಿತಾದ ಹಾಡೊಂದನ್ನು ಇನ್ಸ್ಟಾಗ್ರಾಮ್ ರೀಲ್ಸ್ನಲ್ಲಿ ಹಂಚಿಕೊಂಡಿದ್ದ ಮೋಹಕತಾರೆ ಇದೀಗ ಅದೇ ಹಾಡಿಗೆ ರೀಲ್ಸ್ ಮಾಡಿದ್ದಾರೆ. ಆದರೆ ಈ ಹಾಡು ಮುರಿದು ಬಿದ್ದ ಪ್ರೇಮಕಹಾನಿಗೆ ಹೇಳಿ ಮಾಡಿಸಿದ ಹಾಡು ಎಂಬುದು ವಿಶೇಷ. ಇದೀಗ ಹಳೆಯ ಸಂಗಾತಿಯನ್ನು ನೆನಪಿಸಿಕೊಳ್ಳುವಂತಹ ಹಾಡಿನ ರೀಲ್ಸ್ನಲ್ಲಿ ರಮ್ಯಾ ಮತ್ತೆ ಕಾಣಿಸಿಕೊಂಡಿದ್ದಾರೆ. ಯಾಕೆ ನೀನಿನ್ನೂ ಮದುವೆಯಾಗಿಲ್ಲ… ಎಂಬ ಪ್ರಶ್ನಾರ್ಥಕ ಸಾಹಿತ್ಯ ಹೊಂದಿರುವ ಈ ಇಂಗ್ಲಿಷ್ ಹಾಡು, ನನ್ನ ಸಂಗಾತಿ ಸತ್ತಿರಬಹುದು…ಇಲ್ಲ ನನಗೆ ಸಂಗಾತಿನೇ ಹುಟ್ಟಿಲ್ಲ ಎಂಬ ಸಾಹಿತ್ಯದೊಂದಿಗೆ ಮುಂದುವರೆಯುತ್ತದೆ. ಯುವ ಗಾಯಕ ಐನಾಟ್ಶೇನ್ ಹಾಡಿರುವ ಈ ಹಾಡು ಭಗ್ನ ಪ್ರೇಮಿಗಳಿಗೆ ಮಾಡಿಸಿದಂತಹ ಸಾಹಿತ್ಯವನ್ನು ಹೊಂದಿದೆ. ಒಟ್ಟಿನಲ್ಲಿ ತೆರೆಮೇಲೆ ಕಾಣಿಸಿಕೊಳ್ಳದ ಸ್ಯಾಂಡಲ್ವುಡ್ನ ಚೆಂದುಳ್ಳಿ ಚೆಲುವೆ ಇದೀಗ ರೀಲ್ಸ್ ಮೂಲಕ ಭಾವನೆಗಳೊಂದಿಗೆ ಹಾವಭಾವ ತೋರಿಸಿ ಗಮನ ಸೆಳೆದಿದ್ದಾರೆ. ಈ ಇನ್ಸ್ಟಾ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಅಭಿಮಾನಿಗಳು ರಮ್ಯಾ ಎಕ್ಸ್ಪ್ರೆಷನ್ಗೆ ಭಾರೀ ಮೆಚ್ಚುಗೆಗಳನ್ನು ವ್ಯಕ್ತಪಡಿಸಿದ್ದಾರೆ.