ಮತ್ತೆ ಮೋದಿ ಪತ್ನಿಯ ವಿಚಾರ ಕೆದಕಿದ ರಮ್ಯಾ
ಯುಜಿಸಿ ಅನುದಾನಿತ ವಿವಿಯೊಂದರಲ್ಲಿ ಮಹಿಳೆಯರಿಗೆ ಆದರ್ಶ ಸೊಸೆ ಹೇಗೆ ಆಗುವುದು ಎಂಬ ವಿಚಾರವನ್ನು ಪಠ್ಯದಲ್ಲಿ ಅಳವಡಿಸಲಾಗುತ್ತಿದೆ ಎಂಬ ಸುದ್ದಿ ಹಿನ್ನಲೆಯಲ್ಲಿ ರಮ್ಯಾ ಪ್ರಧಾನಿ ಮೋದಿ ವೈವಾಹಿಕ ವಿಚಾರವನ್ನು ಕೆಣಕಿದ್ದಾರೆ.
ಮೊದಲು ಪುರುಷರು ಆದರ್ಶ ಪತಿ ಆಗುವುದು ಹೇಗೆ ಎಂದು ಪ್ರಧಾನಿ ಮೋದಿಯವರಿಂದಲೇ ಕೋರ್ಸ್ ಪ್ರಾರಂಭಿಸಿದರೆ ಹೇಗೆ? ಒಂದು ವೇಳೆ ಇದು ಅವರ ವೈಯಕ್ತಿಕ ಆಯ್ಕೆ ಎಂದಾದರೆ ಆ ನಿಯಮ ನಮಗೆ ಮಹಿಳೆಯರಿಗೂ ಅನ್ವಯವಾಗುತ್ತದೆ. ಸರ್ಕಾರ ಮಹಿಳೆಯರ ವೈಯಕ್ತಿಕ ವಿಚಾರದಲ್ಲಿ ಮೂಗು ತೂರಿಸಲಾಗದು. ನಾವು ಹೇಗಿರಬೇಕೆಂದು ಯಾರೂ ಹೇಳಿಕೊಡಬೇಕಾಗಿಲ್ಲ ಎಂದು ರಮ್ಯಾ ಟ್ವೀಟ್ ಮಾಡಿದ್ದಾರೆ. ಈ ಮೂಲಕ ಪ್ರಧಾನಿ ಮೋದಿ ವೈವಾಹಿಕ ವಿಚಾರವನ್ನು ಕೆದಕಿದ್ದಾರೆ.