ಊರಿಗೆ ಬಾರದ ರಮ್ಯಾ ವೋಟ್ ಹಾಕ್ತಾರಾ?
ಮಂಡ್ಯದಲ್ಲಿ ರಮ್ಯಾ ಇಂದಿನ ಸ್ಥಳೀಯ ಸಂಸ್ಥೆ ಮತ ಪ್ರಕ್ರಿಯೆಯಲ್ಲಿ ಮತದಾನ ಮಾಡಬೇಕಿತ್ತು. ಆದರೆ ಇದುವರೆಗೆ ಮಂಡ್ಯಕ್ಕೆ ರಮ್ಯಾ ಆಗಮನವಾಗಿಲ್ಲ. ಹೀಗಾಗಿ ಈ ಬಾರಿಯೂ ರಮ್ಯಾ ಮತದಾನ ಮಾಡದೇ ಇರುತ್ತಾರಾ ಎಂಬ ಪ್ರಶ್ನೆ ಎದ್ದಿದೆ.
ಸೋಷಿಯಲ್ ಮೀಡಿಯಾ ಮುಖಾಂತರ ಮತದಾನ ಮಾಡಿ ಎಂದು ಮನವಿ ಮಾಡುವ ಮಾಜಿ ಸಂಸದೆ ತಾವೇ ಮತದಾನ ಮಾಡದಿದ್ದರೆ ಹೇಗೆ ಎಂಬುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.