ನವದೆಹಲಿ: ಮಾಜಿ ಯುಕೆ ಪ್ರಧಾನಿ ರಿಷಿ ಸುನಕ್ ಈ ವಾರ ಗೋಲ್ಡ್‌ಮನ್ ಸ್ಯಾಚ್ಸ್‌ಗೆ ಹಿರಿಯ ಸಲಹೆಗಾರರಾಗಿ ಸೇರ್ಪಡೆಗೊಂಡರು.
ಕಳೆದ ವರ್ಷ ಕನ್ಸರ್ವೇಟಿವ್ ಪಕ್ಷದ ನಾಯಕತ್ವಕ್ಕೆ ರಾಜೀನಾಮೆ ನೀಡಿದ ನಂತರ ಗೋಲ್ಡ್‌ಮನ್ ಸ್ಯಾಚ್ಸ್‌ಗೆ ಹಿರಿಯ ಸಲಹೆಗಾರರಾಗಿ ಸೇರಲು ಸಿದ್ಧರಾಗಿದ್ದಾರೆ. 21 ವರ್ಷಗಳ ನಂತರ ವಾಲ್ ಸ್ಟ್ರೀಟ್ ಹೂಡಿಕೆ ಬ್ಯಾಂಕ್‌ಗೆ ಮರಳಲಿರುವ ಸುನಕ್‌ಗೆ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಮಾಡುತ್ತಿದ್ದಾರೆ.
ಕಾರಣ ಅವರ ಮಾವ ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ ಅವರ ಸಲಹೆಯನ್ನು ಮುಂದಿಟ್ಟು ಸುನಕ್ ಅವರನ್ನು ಬಳಕೆದಾರರು ಕಾಲೆಳೆದಿದ್ದಾರೆ.
ಈ ಹಿಂದೆ ನಾರಾಯಣ ಮೂರ್ತಿ ಅವರು ಯುವಕರು ವಾರಕ್ಕೆ 70ಗಂಟೆ ಕೆಲಸ ಮಾಡಬೇಕು ಎಂದು ಹೇಳಿ ತೀವ್ರ ವಿವಾದಕ್ಕೆ ಒಳಗಾಗಿದ್ದರು. ಈ ಹೇಳಿಕೆ ಭಾರೀ ಟೀಕೆಗೆ ಗುರಿಯಾಗಿದ್ದರು ನಾರಾಯಣ ಮೂರ್ತಿ ಮಾತ್ರ ತಮ್ಮ ಹೇಳಿಕೆಯನ್ನು, ನನ್ನ ದೃಷ್ಟಿಕೋನವನ್ನು ಬದಲಾಯಿಸಿಕೊಳ್ಳುವುದಿಲ್ಲ ಎಂದು ಪ್ರತಿಪಾದಿಸಿದ್ದರು.
ಈ ವಿಚಾರವಾಗಿ ಸುನಕ್ ಅವರನ್ನು ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ಪ್ರಶ್ನೆ ಮಾಡುತ್ತಿದ್ದಾರೆ.
ಬಳಕೆದಾರರು ಸುನಕ್ ವಾರಕ್ಕೆ 70 ಗಂಟೆಗಳ ಕಾಲ ಕೆಲಸ ಮಾಡಲು ಯೋಜಿಸಿದ್ದಾರೆಯೇ ಎಂದು ಹಾಸ್ಯ ಮಾಡಿದ್ದಾರೆ.