ಪಕ್ಷದ ಹೆಸರು ಅಧಿಕೃತವಾಗಿ ಘೋಷಿಸಿದ ರಿಯಲ್ ಸ್ಟಾರ್ ಉಪ್ಪಿ
ಬೆಂಗಳೂರು: ರಿಯಲ್ ರಾಜಕೀಯಕ್ಕೆ ಬರುವುದಾಗಿ ಘೋಷಿಸಿ ತೀವ್ರ ಸಂಚಲನ ಮೂಡಿಸಿದ್ದ ರಿಯಲ್ ಸ್ಟಾರ್ ಉಪೇಂದ್ರ ತಮ್ಮ ಪಕ್ಷದ ಹೆಸರು ಅಧಿಕೃತವಾಗಿ ಘೋಷಿಸಿದ್ದಾರೆ. ತಮ್ಮ ಪಕ್ಷಕ್ಕೆ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿ(KPJP) ಎಂದು ಹೆಸರಿಟ್ಟಿದ್ದಾರೆ.
ಕಾರ್ಯಕ್ರಮದಲ್ಲಿ ಉಪೇಂದ್ರ ತಂದೆ, ತಾಯಿ, ಸಹೋದರ ಸುಧೀಂದ್ರ, ಪತ್ನಿ ಪ್ರಿಯಾಂಕ, ಚಿತ್ರರಂಗದ ಸ್ನೇಹಿತರು ಸಾತ್ ನೀಡಿದರು. ಎಲ್ಲರೂ ಸಹ ಖಾಕಿವಸ್ತ್ರದಲ್ಲಿ ಗಮನ ಸೆಳೆದರು.