ವಿವಾದಿತ ಸ್ಟೀಲ್ ಬ್ರಿಡ್ಜ್ ಪುನರ್ರಚನೆ; ಈ ಬಗ್ಗೆ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದೇನು?

ಮಂಗಳವಾರ, 1 ಜನವರಿ 2019 (13:07 IST)
ಬೆಂಗಳೂರು : ವಿವಾದಿತ  ಸ್ಟೀಲ್ ಬ್ರಿಡ್ಜ್ ಪುನರ್ರಚನೆ ಮಾಡಲು ಸರ್ಕಾರ ಮತ್ತೆ ಯೋಜನೆಗಳನ್ನು ಕೈಗೆತ್ತಿಕೊಳ್ಳಲು ಮುಂದಾಗಿದೆ.


ಈ ಬಗ್ಗೆ ಮಾತನಾಡಿದ ಡಿಸಿಎಂ, ಬೆಂಗಳೂರು ಅಭಿವೃದ್ಧಿ ಸಚಿವ ಡಾ.ಜಿ.ಪರಮೇಶ್ವರ್ ಅವರು,’ಚಾಲುಕ್ಯ ಸರ್ಕಲ್ ನಿಂದ ಎಸ್ಟೀಮ್ ಮಾಲ್ ವರೆಗಿನ ಬ್ರಿಡ್ಜ್ ನಿರ್ಮಾಣಕ್ಕೆ  ಸಿದ್ದರಾಮಯ್ಯ  ಸರ್ಕಾರದಲ್ಲಿ ನಿರ್ಣಯ ಕೈಗೊಳ್ಳಲಾಗಿತ್ತು. ಆದರೆ ಡಿಪಿಆರ್ ಮುಗಿದು ಯೋಜನೆಗೆ ಮುಂದಾದಾಗ ವಿವಾದಕ್ಕೀಡಾಗಿದ್ದರಿಂದ ಬ್ರಿಡ್ಜ್ ಕಾರ್ಯ ಸ್ಥಗಿತಗೊಂಡಿತ್ತು.


‘ಆದರೆ ಇದೀಗ ಮತ್ತೆ ಯೋಜನೆಗೆ ಚಾಲನೆ ನೀಡಲು ಸರ್ಕಾರದಿಂದ ಚಿಂತನೆ ನಡೆಸಲಾಗಿದೆ. ಹಳೆಯ ಡಿಪಿಆರ್ ಪುನರ್ ಪರಿಶೀಲಿಸಿ ಕಾರ್ಯಕೈಗೊಳ್ಳಲಾಗುವುದು. ಸಾರ್ವಜನಿಕರ ಅಭಿಪ್ರಾಯ ಪಡೆದು ಸರ್ಕಾರ ತೀರ್ಮಾನ ಕೈಗೊಳ್ಳಲಿದೆ. ಒಂದು ವೇಳೆ ಉತ್ತಮ ಅಭಿಪ್ರಾಯ ಬಂದರೆ ಯೋಜನೆಗೆ ಗ್ರೀನ್ ಸಿಗ್ನಲ್ ಸಿಗಲಿದೆ. ಕೇವಲ 20 ನಿಮಿಷದಲ್ಲಿ ಏರ್ ಪೋರ್ಟ್ ತಲುಪುವ  ಅವಕಾಶ ಸಿಗಲಿದೆ. ಹಾಗೇ ಡಿಪಿಆರ್ ನಲ್ಲಿ ಕೆಲ ಬದಲಾವಣೆ ಮಾಡಲು ಸರ್ಕಾರ ನಿರ್ಧಾರ ಮಾಡಿರುವುದಾಗಿ ಡಾ.ಜಿ.ಪರಮೇಶ್ವರ್ ಅವರು ಹೇಳಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ