ಸಚಿವ ಸಂಪುಟ ಪುನಾರಚನೆ?- ವಲಸಿಗರಿಗೆ ಸಚಿವ ಸ್ಥಾನ: ಮೂಲ ಬಿಜೆಪಿಗರ ಕಥೆ?
ರಾಜ್ಯ ಸರಕಾರದ ಬಹು ನಿರೀಕ್ಷಿತ ಸಚಿವ ಸಂಪುಟ ವಿಸ್ತರಣೆ ಅಥವಾ ಪುನರಚನೆ ಗೊಂದಲಕ್ಕೆ ಸಧ್ಯದಲ್ಲೇ ತೆರೆ ಬೀಳಲಿದೆ.
ದೆಹಲಿಗೆ ತೆರಳಲು ಮುಂದಾಗಿರುವ ಸಿಎಂ ಬಿ.ಎಸ್.ಯಡಿಯೂರಪ್ಪನವರು, ಹೈಕಮಾಂಡ್ ಅನುಮತಿಗಾಗಿ ಕಾಯುತ್ತಿದ್ದಾರೆ.
ದೆಹಲಿಯಿಂದ ಸಿಎಂ ಬಂದ ಕೂಡಲೇ ಯಾವುದೇ ಕ್ಷಣದಲ್ಲಿ ಸಚಿವ ಸಂಪುಟ ವಿಸ್ತರಣೆ ಅಥವಾ ಪುನರಚನೆ ಘೋಷಣೆ ಮಾಡೋದರಲ್ಲಿ ಸಂದೇಹವಿಲ್ಲ.
ಬೇರೆ ಪಕ್ಷಗಳಿಂದ ಬಿಜೆಪಿ ಬಂದಿರುವ ಇಬ್ಬರು ವಲಸಿಗರು ಹಾಗೂ ಉಳಿದವರಲ್ಲಿ 6 ಮೂಲ ಬಿಜೆಪಿಗರಿಗೆ ಸಚಿವ ಸ್ಥಾನ ಸಿಗೋದಾಗಿ ಪಕ್ಷದ ಉನ್ನತ ಮೂಲಗಳು ಸ್ಪಷ್ಟಪಡಿಸಿವೆ.