ಕೊಲ್ಲೂರು ಮೂಕಾಂಬಿಕೆಯ ಕಾಣಿಕೆ ಹುಂಡಿಯಲ್ಲಿ ಸಿಕ್ತು ಕೋಟಿ ಹಣ!

ಬುಧವಾರ, 25 ಅಕ್ಟೋಬರ್ 2017 (08:54 IST)
ಮಂಗಳೂರು: ಇದೆಲ್ಲಾ ನವರಾತ್ರಿ ಇಫೆಕ್ಟ್ ಎಂದರೂ ತಪ್ಪಾಗಲಾರದು. ರಾಜ್ಯದ ಶ್ರೀಮಂತ ದೇಗುಲಗಳ ಪೈಕಿ ಒಂದಾದ ಕೊಲ್ಲೂರು ಶ್ರೀ ಮೂಕಾಂಬಿಕೆ ದೇಗುಲದ ಕಾಣಿಕೆ ಹುಂಡಿಯಿಂದ ಕೋಟಿ ರೂ. ಸಂಗ್ರಹವಾಗಿ ದಾಖಲೆ ಮಾಡಿದೆ.

 
1.10 ಕೋಟಿ ರೂ. ಹೆಚ್ಚು ಕಾಣಿಕೆ ಸಂಗ್ರಹವಾಗಿದ್ದು, ಇದು ಈವರೆಗಿನ ಅತೀ ಹೆಚ್ಚು ದಾಖಲೆಯಾಗಿದೆ. ಈ ತಿಂಗಳು ನವರಾತ್ರಿ ಹಬ್ಬವಿದ್ದದ್ದರಿಂದಲೋ, ಸಾಲುಸಾಲು ರಜೆಯಿದ್ದಿದ್ದರಿಂದಲೋ ದೇವಾಲಯಕ್ಕೆ ಭಕ್ತರು ಸಾಕಷ್ಟು ಸಂಖ್ಯೆಯಲ್ಲಿ ಆಗಮಿಸಿದ್ದರು.

ಕಳೆದ ವರ್ಷ 1.6 ಕೋಟಿ ರೂ. ಸಿಕ್ಕಿದ್ದೇ ಈವರೆಗಿನ ದಾಖಲೆಯಾಗಿತ್ತು. ಆದರೆ ಈ ತಿಂಗಳ ಕಾಣಿಕೆ ಅದನ್ನೂ ಮೀರಿಸಿದೆ. ವಿಶೇಷವೆಂದರೆ ಇದರಲ್ಲಿ 1 ಲಕ್ಷ  ರೂ. ಗಿಂತಲೂ ಅಧಿಕ ವಿದೇಶೀ ಕರೆನ್ಸಿ ಕೂಡಾ ಲಭಿಸಿದೆಯಂತೆ. ಅಷ್ಟೇ ಅಲ್ಲದೆ, 870 ಗ್ರಾಂ ಚಿನ್ನ, 3.2 ಕೆ.ಜಿ ಬೆಳ್ಳಿ ಸಾಮಾನು ಲಭಿಸಿದೆ ಎನ್ನಲಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ